December 19, 2024

Bhavana Tv

Its Your Channel

ಕಾಮತ್ ಪ್ಲಸ್‌ರವರಿಂದ ಅಗತ್ಯ ಆಹಾರ ಸಮಗ್ರಿ ಕಿಟ್ಟ್ ವಿತರಣೆ.

ಭಟ್ಕಳ: ಕೊರೊನಾ ವೈರಸ್ ತಡೆಗಟ್ಟಲು ಎಲ್ಲೆಡೆ ಲಾಕ್‌ಡೌನ್ ಮಾಡಿರುವುದರಿಂದ ಜನರು ಮನೆಯಲ್ಲೇ ಇದ್ದು, ಅಗತ್ಯ ವಸ್ತುಗಳಿಗಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೊರೋನಾ ಸಂಕಷ್ಟಕ್ಕೆ ಸಿಲಿಕಿರುವ ಈ ಸಂದರ್ಭದಲ್ಲಿ ಭಟ್ಕಳದ ಜನತೆಯ ಸಂಕಷ್ಟಕ್ಕೆ ಅಂಕೋಲಾದ ಉದ್ಯಮಿ ಮಂಗಲದಾಸ ಕಾಮತ್ ಅವರು ಸ್ಪಂದಿಸಿದ್ದು ತಾಲೂಕಿನ ವಿವಿಧ ಕಡೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

ಕಾಮತ್ ಪ್ಲಸ್ ಹೆಸರಿನಲ್ಲಿ ಭಟ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸಿಮೆಂಟ್ ಸಗಟು ವ್ಯಾಪಾರವನ್ನು ಹೊಂದಿದ್ದ ಇವರು ಇಲ್ಲಿನ ರಂಜನ್ ಇಂಡೇನ್ ಗ್ಯಾಸ್ ಎಜೆನ್ಸಿಯ ಮಾಲಕಿ ಹಾಗೂ ಉ.ಕ.ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ಶಿವಾನಿ ಶಾಂತಾರಾಮ ಮತ್ತು ಭಟ್ಕಳ ಕಮ್ಯುನಿಕೇಶನ್‌ನ ಶಾಂತರಾಮ ಭಟ್ಕಳ ಅವರ ಮೂಲಕ ಸಂಕಷ್ಟದಲ್ಲಿರುವ ೬೦ಕ್ಕೂ ಅಧಿಕ ಜನರಿಗೆ ಜೀವನಾವಶ್ಯಕ ವಸ್ತುಗಳ ಕಿಟ್‌ಗಳನ್ನು ತಾಲೂಕಿನ ಗ್ರಾಮೀಣ ಭಾಗವಾದ ಮಾರುಕೇರಿ ಗ್ರಾಮ ಪಂಚಾಯತ್ ಭಾಗದಲ್ಲಿ ವಿತರಿಸಿದ್ದಾರೆ. ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ ಉದ್ಯಮಿ ಮಂಗಲದಾಸ ಕಾಮತ್ ಹಾಗೂ ಶಾಂತರಾಮ ದಂಪತಿಯನ್ನು ಮಾರುಕೇರಿ, ಕೋಟಖಂಡ ಭಾಗದ ಸಾರ್ವಜನಿಕರು ಅಭಿನಂದಿಸಿದ್ದಾರೆ.

error: