September 17, 2024

Bhavana Tv

Its Your Channel

ತುರ್ತು ಸಂಧರ್ಬದಲ್ಲಿಯೂ ಉಡುಪಿ ಜಿಲ್ಲಾಧಿಕಾರಿಗಳು ಮಾನವೀಯತೆಯ ಆಧಾರದ ಮೇಲೆ ಬಿಡದಿದ್ದಲ್ಲಿ ಇಲ್ಲಿನ ರೋಗಿಗಳ ಜನರ ಪರಿಸ್ಥಿತಿ ಕಷ್ಟಕರವಾಗಲಿದೆ.

ಭಟ್ಕಳ: ಉಡುಪಿ ಜಿಲ್ಲಾಡಳಿತದ ಕಠಿಣ ನಿಲುವಿನ ಪರಿಣಾಮ ಭಟ್ಕಳದ ಖಾಸಗಿ ಅಂಬ್ಯುಲೆನ್ಸ್ ಚಾಲಕರು ರೋಗಿಗಳನ್ನು ಕರೆದುಕೊಂಡು ಹೋಗಲು ಬಿಡುತ್ತಿಲ್ಲ. ತುರ್ತು ಸಂಧರ್ಬದಲ್ಲಿಯೂ ಉಡುಪಿ ಜಿಲ್ಲಾಧಿಕಾರಿಗಳು ಮಾನವೀಯತೆಯ ಆಧಾರದ ಮೇಲೆ ಬಿಡದಿದ್ದಲ್ಲಿ ಇಲ್ಲಿನ ರೋಗಿಗಳ ಜನರ ಪರಿಸ್ಥಿತಿ ಕಷ್ಟಕರವಾಗಲಿದೆ. ಈ ಬಗ್ಗೆ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಈ ಕಠಿಣ ಆದೇಶವನ್ನು ಸಡಿಲಿಸಿ, ಅಂಬ್ಯುಲೆನ್ಸ್ ಗಳಿಗೆ ವಿನಾಯತಿ ನೀಡಬೇಕು ಎಂದು ಅಂಬ್ಯುಲೆನ್ಸ್ ಚಾಲಕರು ಅಳಲು ತೋಡಿಕೊಂಡರು.

ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಮೆಡಿಕಲ್ ಎಮರ್ಜೆನ್ಸಿಯ ಹಿನ್ನೆಲೆ ಭಟ್ಕಳದ ರೋಗಿಗಳು ಅಂಬ್ಯುಲೆನ್ಸ ಪಡೆದು ಪಾಸ್ ನೀಡುತ್ತಿದ್ದಾರೆ ಆದರೆ ಅಲ್ಲಿನ ಪೊಲೀಸ್‍ರು ನಿಮ್ಮಲ್ಲಿನ ಜಿಲ್ಲಾಧಿಕಾರಿಗಳ ಪಾಸ ನಮಗೆ ಬೇಡ ನಮ್ಮ ಡಿಸಿ ಉತ್ತರ ಕನ್ನಡ ಜಿಲ್ಲೆಯ ಯಾವುದೇ ಅಂಬ್ಯುಲೆನ್ಸ ಬಿಡಬಾರದೆಂಬ ಉಡುಪಿ ಡಿಸಿ ಅವರ ಆದೇಶ ನೀಡಿದ್ದಾರೆ ಈ ಹಿನ್ನೆಲೆ ನಾವು ಅಂಬ್ಯುಲೆನ್ಸ ಬಿಡಲು ಸಾಧ್ಯವಿಲ್ಲ ಎಂಬ ಮಾತು ಗಡಿಯಲ್ಲಿನ ಪೊಲೀಸರದ್ದಾಗಿದೆ ಎನ್ನುತ್ತಾರೆ ಅಂಬ್ಯುಲೆನ್ಸ ಚಾಲಕರು.

ನಮ್ಮ ಜಿಲ್ಲೆಯಲ್ಲಿ ಯಾವುದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವದರಿಂದ ಭಟ್ಕಳದ ರೋಗಿಗಳು ಕೋರೋನಾ ಹೊರತು ಬೇರೆ ತುರ್ತು ತಪಾಸಣೆ, ಚಿಕಿತ್ಸೆಗೆ ಉಡುಪಿ, ಕುಂದಾಪುರ, ಮಂಗಳುರು ತೆರಳುತ್ತಿದ್ದಾರೆ ಹೊರತು ನಮ್ಮಲ್ಲಿ ಎಲ್ಲಾ ವ್ಯವಸ್ಥೆಗಳಿದ್ದರೆ ಉಡುಪಿಗೆ ತೆರಳುವ ಪ್ರಮೇಯವೇ ಬರುತ್ತಿರಲಿಲ್ಲ. ಅವರ ಜಿಲ್ಲೆಗೆ ಕೋರೋನಾ ಬರಬಾರದು ಎಂಬ ಉದ್ದೇಶವಿದ್ದು ಅದರಂತೆ ಉಡುಪಿ ಡಿಸಿ ಉತ್ತಮ ಕೆಲಸ ಮಾಡಿದ್ದು ಆದರೆ ಇಂತಹ ತುರ್ತು ಆರೋಗ್ಯ ಸಂಧರ್ಭದಲ್ಲಿ ಗಂಭಿರತೆಯನ್ನು ಅರಿಯದೇ ಈ ರೀತಿ ತಾಸು ಗಟ್ಟಲೇ ತಡೆಹಿಡಿಯುವುದು ಇಲ್ಲವಾದರೆ ರೋಗಿ ಸಹಿತ ವಾಪಸ್ಸು ಕಳುಹಿಸುವದು ಎಷ್ಟರ ಮಟ್ಟಿಗೆ ಸಮಂಜಸ ಎನ್ನುತ್ತಾರೆ ಖಾಸಗಿ ಅಂಬುಲೆನ್ಸ ಚಾಲಕರು. ತುರ್ತು ಸಂಧರ್ಭದಲ್ಲಿ ಒಂದು ಅಂಬ್ಯುಲೆನ್ಸನಲ್ಲಿ ಚಾಲಕ ಸಹಿತ ಓರ್ವ ರೋಗಿ ಹಾಗೂ ಅವರ ಜೊತೆಗೆ ಓರ್ವರನ್ನು ದಾಖಲೆಗಳ ಪರಿಶೀಲನೆ ಮಾಡಿ ಉಡುಪಿಗೆ ಬಿಡುವಂತೆ ಅವಕಾಶ ನೀಡಬೇಕು ಇಲ್ಲವಾದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.

ಪಾಸ ವಿತರಣೆಗೆ ವಿಳಂಬ, ಅಂಬುಲೆನ್ಸಗೆ ಪಾಸ ವಿನಾಯತಿ: ಭಟ್ಕಳದ ಖಾಸಗಿ ಅಂಬ್ಯುಲೆನ್ಸಗಳಿಗೆ ಪಾಸ ವಿನಾಯತಿ ನೀಡಬೇಕು, ಇನ್ನು ರೋಗಿಯ ಕಡೆ ಅವರಿಗೂ ಸಹ ಸಹಾಯಕ ಆಯುಕ್ತರ ಕಛೇರಿಗೆ ತೆರಳಿ ಅಲ್ಲಿಯೂ ತಾಸ ಗಟ್ಟಲೇ ಕುಳಿತು ಪಾಸ ಪಡೆದುಕೊಳ್ಳುವವರೆಗೆ ತುರ್ತು ಅವಶ್ಯಕತೆಯ ವೇಳೆ ರೋಗಿಯ ಸ್ಥಿತಿಗೆ ತೊಡಕಾಗಲಿದೆ. ಒಂದು ಪಾಸ ವ್ಯವಸ್ಥೆ ಸರಳೀಕೃತ ಮಾಡಿ ಇಲ್ಲದಿದ್ದರೆ ಕೊನೆಯ ಪಕ್ಷ ರೋಗಿಗಳಿಗೆ ವೈದ್ಯರು ನೀಡಿದ ದಾಖಲೆಯನ್ನು ಪರಿಶೀಲನೆ ಮಾಡಿಯಾದರು ರೋಗಿಗಳು ತಕ್ಷಣಕ್ಕೆ ಆಸ್ಪತ್ರೆಗೆ ಹೋಗುವಂತೆ ವ್ಯವಸ್ಥೆ ಮಾಡಬೇಕು. ಇನ್ನು ಕೆಲವು ಸಂಧರ್ಬದಲ್ಲಿ ಭಟ್ಕಳದಿಂದ ಉಡುಪಿ, ಕುಂದಾಪುರಕ್ಕೆ ಹೋದ ರೋಗಿಗಳನ್ನು ಹೆಸರನ್ನು ರಿಜಿಸ್ಟರನಲ್ಲಿ ದಾಖಲಿಸುತ್ತಿಲ್ಲ. ಇನ್ನು ಕೆಲವು ಕಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಹಿಂದೆ ಮುಂದೆ ನೋಡುತ್ತಿದ್ದು ಇದೇ ಕಾರಣದಿಂದ ಭಟ್ಕಳದಿಂದ ಹೋದ ಓರ್ವ ಹೃದ್ರೋಗಿಯೂ ಸಾವನ್ನಪ್ಪಿರುವ ಘಟನೆಯೂ ಸಹ ನಡೆದಿರುವದು ತಿಳಿದು ಬಂದಿದೆ.

ಉಡುಪಿ ಡಿಸಿಯಿಂದ ಪರವಾನಿಗೆ ಬೇಕು: ಭಟ್ಕಳದ ಖಾಸಗಿ ಅಂಬ್ಯುಲೆನ್ಸಗಳ ಚಾಲಕರು ನಮಗೆ ಇಲ್ಲಿನ ರೋಗಿಗಳನ್ನು ಕುಂದಾಪುರ, ಉಡುಪಿಗೆ ಕರೆದುಕೊಂಡು ಹೋಗಲು ಉಡುಪಿ ಜಿಲ್ಲಾಧಿಕಾರಿಗಳು ಪರವಾನಿಗೆ ನೀಡುವ ತನಕ ನಾವು ಭಟ್ಕಳದಲ್ಲಿ ಸ್ಥಳಿಯವಾಗಿ ರೋಗಿಗಳನ್ನು ಸಾಗಿಸಲಿದ್ದೇವೆ ಹೊರತು ಉಡುಪಿ ಜಿಲ್ಲೆಯ ಗಡಿಗೆ ರೋಗಿಗಳನ್ನು ಕರೆದುಕೊಂಡು ಹೋಗುವುದಿಲ್ಲ ಎಂದು ಅಂಬುಲೆನ್ಸ ಚಾಲಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಒಟ್ಟಾರೆ ಇದರಿಂದ ಇಲ್ಲಿನ ರೋಗಿಗಳಿಗೂ ಜೀವ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿದ್ದು, ಇದಕ್ಕೆ ನೇರವಾಗಿ ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳೇ ಹೊಣೆಯಾಗಲಿದ್ದು, ಈ ತಕ್ಷಣಕ್ಕೆ ರಾಜ್ಯ ಸರಕಾರಕ್ಕೆ ಉಡುಪಿ ಜಿಲ್ಲಾಧಿಕಾರಿಗಳ ಕಠಿಣ ನಿಲುವಿನ ಕ್ರಮವನ್ನು ಸಡಿಲಿಕರಿಸಿ ಅಂಬ್ಯುಲೆನ್ಸ ಸಂಚಾರಕ್ಕೆ ಅನೂವು ಮಾಡಿಕೊಂಡುವಂತೆ ಗಮನ ಹರಿಸಬೇಕಿದೆ.
ಈ ಸಂಧರ್ಭದಲ್ಲಿ ಎ.ಬಿ.ಎಮ್. ಜನರಲ್ ಸೆಕ್ರೆಟರಿ ಅಬ್ದುಲ್ ಖಾಲಿಕ್, ಚಾಲಕ ಶಬ್ಬೀರ, ವೇಲ್ಪೇರ್ ಹಾಸ್ಪಿಟಲ್ ಅಂಬ್ಯುಲೆನ್ಸ ಚಾಲಕ ಮುಸ್ತಾಕ್ ಅಹ್ಮದ್, ರಾಬಿಟ್ ಸೊಸೈಟಿ ಅಂಬ್ಯುಲೆನ್ಸ ಚಾಲಕ ಅಮನ್ನುಲ್ಲಾ, ಸಮಾಜ ಸೇವಕ ಇರ್ಷಾದ ಸಿದ್ದಿಕ್ ಮೊದಲಾದವರು ಇದ್ದರು.

ಈ ಸಂದರ್ಭದಲ್ಲಿ: ಸುರೇಶ ನಾಯ್ಕ ರೋಗಿಗಳ ಸಂಬಂಧಿಕರು ಮಾತನಾಡಿ
‘ಬುಧವಾರದಂದು ನಮ್ಮ ಪರಿಚಯಸ್ಥರನ್ನು ಉಡುಪಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಲುವಾಗಿ ಪಾಸ ಪಡೆದುಕೊಳ್ಳಲು ತೆರಳಿದ್ದು, ಬೆಳಿಗ್ಗೆಯಿಂದ ಕಾದು ಕಾದು ಸಂಜೆ 4-5 ಗಂಟೆಗೆ ಪಾಸ ಕೈ ಸೇರಿದೆ. ಹೀಗಾದ್ದಲ್ಲಿ ತುರ್ತು ಆರೋಗ್ಯ ಸಮಸ್ಯೆಯಿದ್ದವರ ಗತಿಯೇನು. ಅತ್ತ ಉಡುಪಿ ಜಿಲ್ಲಾಧಿಕಾರಿಗಳು ತಮಗೆನೋ ಪ್ರಶಸ್ತಿ ಸಿಗುತ್ತದೆಂಬ ಉದ್ದೇಶಕ್ಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ ಆದರೆ ಉತ್ತರ ಕನ್ನಡ ಜನರು ಇದರಿಂದ ಸಮಸ್ಯೆಗೊಳಗಾಗಿದ್ದಾರೆ.

ಈ ಸಂದರ್ಭದಲ್ಲಿ: ಲೈಫ್ ಕೇರ್ ಅಂಬ್ಯುಲೆನ್ಸ ಮಾಲಕ, ಚಾಲಕ
ವಿನಾಯಕ ನಾಯ್ಕ ಮಾತನಾಡಿ

‘ನಮ್ಮ ಜಿಲ್ಲೆಯಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳಿಂದಾಗಿ ಉತ್ತರ ಕನ್ನಡದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಇಲ್ಲವಾಗಿದೆ. ಈಗ ಈ ಕೋರೋನಾದಿಂದ ಸಮಸ್ಯೆ ಅನುಭವಿಸುತ್ತಿರುವವರು ಸಾಮಾನ್ಯ ಜನರು ಹೊರತು ಶ್ರೀಮಂತರಲ್ಲ. ಅಂಬ್ಯುಲೆನ್ಸನಲ್ಲಿ ನಿಗದಿತ ಜನರಕ್ಕಿಂತ ಹೆಚ್ಚು ಜನರು ತೆರಳಿದರೆ ಅಂತಹವರ ಮೇಲೆ ಕ್ರಮಕ್ಕೆ ಮುಂದಾಗಿ ಹೊರತು ನೈಜ ಹಾಗೂ ಅಗತ್ಯ ಆರೋಗ್ಯ ತಪಾಸಣೆಗೆ ತೆರಳುವವರನ್ನು ತಡೆದು ನಿಲ್ಲಿಸಬೇಡಿ

error: