December 22, 2024

Bhavana Tv

Its Your Channel

ಹೊನ್ನಾವರದಲ್ಲಿ ಮೀನು ಮಾರಾಟಕ್ಕೆ ಪರವಾನಿಗೆ

ಹೊನ್ನಾವರ ಎ. ೧೬ : ತಾಲೂಕಿನ ೩೨೦ ನಾಡದೋಣಿಗಳಲ್ಲಿ ೩೧೫ ಜನರಿಗೆ ನಾಡದೋಣಿ ಮೀನುಗಾರಿಕೆ ನಡೆಸಲು ಪರವಾನಿಗೆ ನೀಡಲಾಗಿದ್ದು ಹೊನ್ನಾವರದಿಂದ ಹಳದೀಪುರದವರೆಗೆ ನಾಲ್ಕು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಇವರು ನಿಗದಿತ ಸ್ಥಳದಿಂದ ಮೀನುಗಾರಿಕೆಗೆ ತೆರಳಿ ಮರಳಿ ಅಲ್ಲಿಗೆ ಬಂದು ಮೀನುಗಳನ್ನು ಮನೆಮನೆಗೆ ಮಾರುವವರಿಗೆ ನೀಡಬೇಕು. ಅಲ್ಲಿ ಜನರನ್ನು ಸೇರಿಸಿ ಮಾರಾಟ ಮಾಡಬಾರದು ಎಂದು ಹೇಳಲಾಗಿದ್ದು ೪ಪೆಟ್ರೋಲ್ ಬಂಕ್‌ಗಳಲ್ಲಿ ಇವರಿಗೆ ಬೇಕಾದ ಇಂಧನದ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ ವಿವೇಕ್ ಶೇಣ್ವಿ ಹೇಳಿದ್ದು ಮೀನುಗಾರಿಕಾ ಇಲಾಖೆಯ ಸಿಬ್ಬಂದಿಗಳು ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ರೆಡ್‌ಕ್ರಾಸ್‌ನಿಂದ ೨೫ಸಾವಿರ ರೂಪಾಯಿ ಮೌಲ್ಯದ ಸೆನಿಟೈಸರ್‌ಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.

error: