December 6, 2024

Bhavana Tv

Its Your Channel

ತೀರಾ ಅವಶ್ಯವಿರುವ ಕುಟುಂಬಗಳಿಗೆ ಹೊನ್ನಾವರ ತಾಲೂಕಿನ ಜಿ.ಎಸ್.ಬಿ ಸಮಾಜದ ವತಿಯಿಂದ ಆಹಾರ ಪದಾರ್ಥಗಳು,ದಿನಸಿಗಳನ್ನು ಹಂಚಲಾಯಿತು.

ಕರೋನಾ ಸೊಂಕು ಪರಿಣಾಮ ಲೌಕಡಾನ್ ಇರುವುದರಿಂದ ಅನೇಕ ಕುಟುಂಬಗಳು ದುಡಿಮೆ ಇಲ್ಲದೆ ತೀರಾ ಸಂಕಷ್ಟದಲ್ಲಿ ಇರುವುದನ್ನು ಅರಿತು ಮನಗಂಡು ಜನರಲ್ಲಿ ಕರೋನಾ ಜಾಗ್ರತೆ ಬಗ್ಗೆ ತಿಳಿಸಿ, ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿ ಹೇಳಿ ಹದಿನೈದು ದಿನಗಳ ಕಾಲ ದಿನ ಬಳಕೆಗೆ ಬರುವಷ್ಟು ಬೆಳೆ,ಎಣ್ಣೆ,ಬಟಾಟೆ, ನಿರುಳ್ಳಿ ಇತರ ದಿನೋಪಯೋಗಿ ಪದಾರ್ಥಗಳು ಮಾವಿನಕುರ್ವಾ ಭಾಗದಲ್ಲಿ 47 ಕುಟುಂಬಗಳಿಗೆ, ಮೋಳಕೋಡ ಭಾಗದಲ್ಲಿ 40 ಕುಟುಂಬಗಳಿಗೆ, ಸಾಲ್ಕೋಡ ಭಾಗದ 50 ಹೀಗೆ ತಾಲೂಕಿನ ಸುಮಾರು 280 ಕುಟುಂಬಗಳಿಗೆ ನೇರವಾದರು. ಈ ಸಂದರ್ಭದಲ್ಲಿ ಜಿ.ಎಸ್.ಬಿ ಸಮಾಜದ ಹಿರಿಯರಾದ ರಾಮದಾಸ್ ಪ್ರಭು ಶಿಕಾರ, ವಿಶ್ವನಾಥ ನಾಯಕ್, ವೆಂಕಟೇಶ ಪ್ರಭು, ಗಣಪತಿ ಕಾಮತ್, ನಮಿತಾ ಉಮೇಶ್ ಕಾಮತ್, ಗುರು ಜೀವೋತ್ತಮ ನಾಯಕ್ ಹಾಗೂ ಸಂಘಟಕರು ಉಪಸ್ಥಿತರಿದ್ದರು. ಸಮಾಜದ ಈ ಸಮಾಜಮುಖಿ ಕಾರ್ಯಕ್ಕೆ ಹೊನ್ನಾವರ ತಾಲೂಕ ಆಡಳಿತ, ಪೋಲಿಸ್ ಇಲಾಖೆಯವರು ಶ್ಲಾಘನೆ ವ್ಯಕ್ತಪಡಿಸಿದೆ.

error: