March 31, 2023

Bhavana Tv

Its Your Channel

ಕೊರೊನಾ ಅವಾಂತರ – ಡಾ. ಕಾಮತ್ ಎಚ್ಚರ

ಹೊನ್ನಾವರ ಎ. ೧೭ : ಕೋವಿಡ್-೧೯ ಭೀತಿಯ ವಾತಾವರಣ ಸೃಷ್ಠಿಸಿದ್ದು ಬಹಳ ಜನರಿಗೆ ತನಗೆ ರೋಗವಿದೆ ಎಂಬ ಸಂಶಯ ಇದ್ದು ಫೋಬಿಯಾ ಆವರಿಸಿದೆ. ಇದನ್ನು ತಡೆಯಲು ಈ ಕೆಳಗಿನ ಸಲಹೆಗಳನ್ನು ಖ್ಯಾತ ಹೃದಯ ವೈದ್ಯ ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್ ನೀಡಿದ್ದಾರೆ.
ಎಲ್ಲ ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಕೊರನಾದಿಂದ ಕೇಂದ್ರೀಕೃತವಾಗಿರುವುದರಿAದ ಇತರ ಹಲವಾರು ಚಿಕಿತ್ಸೆಯಲ್ಲಿ ವಿಳಂಭವಾಗುತ್ತಿರುವುದು ರೋಗಿಗಳ ಕಳವಳಕ್ಕೆ ಕಾರಣವಾಗಿದೆ. ಕೆಲವು ಆಸ್ಪತ್ರೆಗಳು ಮುಚ್ಚಿವೆ, ಕೆಲವು ವೈದ್ಯರ ಸಿಗುತ್ತಿಲ್ಲ. ಇನ್ನೂ ಕೆಲವು ಕಡೆ ಎಲ್ಲ ರೋಗಿಗಳನ್ನು ಒಂದೇ ಸೂರಿನಡಿ ಪರಿಶೀಲನೆ ಮಾಡಲಾಗುತ್ತದೆ, ವೈದ್ಯಕೀಯ ಸಿಬ್ಬಂದಿಗಳ ಕೊರತೆ ಉಂಟಾಗಿದೆ. ಕೆಲವು ಕಡೆ ರೋಗಿಗಳ ಅಂತರ್ ಜಿಲ್ಲಾ ಓಡಾಟ ನಿರ್ಬಂಧಿಸಲಾಗಿದ್ದು ನಿಯಮಿತ ತಪಾಸಣೆಗೆ ಅಡ್ಡಿಯಾಗಿ ಭೀತಿಯಿಂದ ಹೃದಯ ತೊಂದರೆ ಉಲ್ಭಣವಾಗುತ್ತಿದೆ. ಇದರಿಂದ ನಿಜವಾದ ರೋಗಿಯೂ ಒಂದೆಡೆ ಕೊರೊನಾ ಭಯದಿಂದ ಇನ್ನೊಂದೆಡೆ ವೈದ್ಯರ ಅಲಭ್ಯತೆಯಿಂದ ಮನೆಯಲ್ಲಿಯೇ ಗಾಬರಿಗೊಂಡು ರೋಗ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಹೃದಯ ವೈಫಲ್ಯದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ.
ಸಾರ್ವಜನಿಕರು ಯಾವುದೇ ಕಾರಣಕ್ಕೂ ಗಾಬರಿಯಾಗದೆ ತಮಗೆ ಯಾವುದೇ ರೋಗದ ಲಕ್ಷಣವಿದ್ದರೆ ಅಥವಾ ರೋಗ ಬಂದ ಅನಿಸಿಕೆ ಇದ್ದರೆ ಎದುರಿಸಲು ಮಾನಸಿಕವಾಗಿ ಸಿದ್ಧವಾಗಬೇಕು, ತಕ್ಷಣ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬಾರದು. ಕೊರೊನಾ ತೊಲಗಿದ ಮೇಲೆ ಉತ್ತಮ ಭವಿಷ್ಯದ ಕುರಿತು ಚಿಂತಿಸಿಬೇಕು. ಮಾನಸಿಕ ಭಯ ಸಾರ್ವತ್ರಿಕವಾದರೆ ಗಂಭೀರ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಮನೆಯಲ್ಲೇ ಉಳಿದು ಸಕಾರಾತ್ಮಕವಾಗಿ ಚಿಂತಿಸಬೇಕು ಎಂದು ತಮ್ಮ ಸಲಹೆ ನೀಡಿದ್ದಾರೆ.

About Post Author

error: