December 20, 2024

Bhavana Tv

Its Your Channel

ಲಾಕ್ ಡೌನ್ ಇದ್ದರೂ ಸಾರ್ವಜನಿಕರ ಸಂಚಾರ, ವಿನೂತನ ಮಾದರಿಯಲ್ಲಿ ಸಾರ್ವಜನಿಕರಿಗೆ ಬುದ್ದಿ ಹೇಳಿದ ಹೊನ್ನಾವರ ಪೋಲಿಸರು.

ಹೊನ್ನಾವರ: ಕರೋನಾ ಮಹಾಮಾರಿ ಸುರಕ್ಷತೆಗಾಗಿ ದೇಶದೆಲ್ಲಡೆ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅನಾವಶ್ಯಕ ವಾಹನ ಸಂಚಾರ ನಡೆಸಬೇಡಿ ಎಂದು ಪ್ರಾರಂಭದಲ್ಲಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಯಿತು. ಬಳಿಕ ಲಾಠಿರುಚಿ , ಲಾಠಿ ಇಲ್ಲದೇ ಜಾಗೃತಿ, ಬೈಕ್ ಸೀಜ್ ನಂತಹ ಹಲವು ಕ್ರಮ ಕೈಗೊಳ್ಳಲಾಯಿತು. ಆದರೂ ಮೆಡಿಕಲ್ ಕಾರಣ ಇಟ್ಟು ಪಟ್ಟಣದತ್ತ ಆಗಮಿಸುತ್ತಿದ್ದರು. ಇದಕ್ಕೆ ಬೇಸತ್ತ ಆಡಳಿತ ಇಂದು ಪಟ್ಟಣಕ್ಕೆ ಬಂದ ವಹನ ಚಾಲಕರನ್ನು ಹಿಡಿದು ಇದೀಗ ಕರೊನಾ ನಿಯಮ ಉಲ್ಲಂಘನೆ ಮಾಡುತ್ತಿದ್ದೇನೆ ಎಂದು ಭಿತ್ತಿಪತ್ರ ಹಿಡಿಸಿ ಪೋಟೊ ತೆಗೆದಿಟ್ಟುಕೊಂಡು ಇನ್ನೊಮ್ಮೆ ಇದೇ ತಪ್ಪನ್ನು ಮಾಡಿದಲ್ಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ನೀಡಲಾಯಿತು.
ಸ್ವತಃ ತಹಶೀಲ್ದಾರ ವಿವೇಕ ಶೆಣ್ವೆ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ, ನೀಲಕಂಠ ಮೇಸ್ತ, ಸಿ.ಪಿ.ಐ ವಸಂತ ಆಚಾರಿ, ಪಿಎಸೈ ಶಶಿಕುಮಾರ್ ,ಸಾವಿತ್ರಿ ನಾಯಕ ಒಂದೊAದು ಭಾಗದಲ್ಲಿ ನಿಂತು ಸಾರ್ವಜನಿಕರಿಗೆ ತಿಳಿ ಹೇಳುವ ಮೂಲಕ ಜಾಗೃತಿ ವಹಿಸುವಂತೆ ಸೂಚಿಸಿದರು. ಸರಿ ಸುಮಾರು ೧೦೦ಕ್ಕೂ ಅಧಿಕ ಬೈಕ್ ಗಳನ್ನು ತಡೆ ಹಿಡಿದು ಕಾರಣ ಕೇಳಿ ಈ ಕಾರ್ಯ ಮಾಡಲಾಯಿತು.
ಮಾಧ್ಯಮದವರನ್ನು ಉದ್ದೇಶಿಸಿ ತಹಶೀಲ್ದಾರ ವಿವೇಕ ಶೇಣ್ವೆ ಮಾತನಾಡಿ ಪಟ್ಟಣದಲ್ಲಿ ಹಲವು ರೀತಿಯ ಸೌಲಭ್ಯಗಳನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರ ಬೆಳೆಗಳಿಗೆ ಸಮಸ್ಯೆ ಆಗದಂತೆ ಸೂಕ್ತ ಕ್ರಮವಹಿಸಲು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅವರು ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಅನಾವಶ್ಯಕವಾಗಿ ಪಟ್ಟಣಕ್ಕೆ ಬರಬೇಡಿ, ಕೋವಿಡ್ ೧೯ ಸುರಕ್ಷತಾ ಕ್ರಮ ಕೈಗೊಳ್ಳಲು ಸರ್ಕಾರದ ನಿಯಮ ಪಾಲಿಸುವಂತೆ ಮನವಿ ಮಾಡಿದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ ಮಾತನಾಡಿ ಪಟ್ಟಣ ಪ್ರದೇಶದಲ್ಲಿ ತರಕಾರಿ, ದಿನಸಿ, ಹಣ್ಣುಗಳನ್ನು ಮನೆಮನೆಗೆ ವಿತರಿಸಲಾಗುತ್ತಿದೆ. ಅಲ್ಲದೇ ಸುರಕ್ಷತಾ ಕ್ರಮ ಕೈಗೊಳ್ಳಲು ಸರ್ಕಾರದ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸುತ್ತಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಅನಾವಶ್ಯಕವಾಗಿ ಮನೆಯಿಂದ ಹೊರಬರದಂತೆ ತಡೆಯಲು ಪೋಲಿಸ್ ಇಲಾಖೆಯೊಂದಿಗೆ ಕೈ ಜೋಡಿಸಿದ್ದು ಭಿತ್ತಿಪತ್ರವನ್ನು ಹಿಡಿಸಿ ಮುಂದೆ ಅನಾವಶ್ಯಕ ಓಡಾಡದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗುತ್ತಿದೆ. ಈ ರೋಗದ ಬಗ್ಗೆ ಸಾರ್ವಜನಿಕರಿಗೆ ಭಯ ಬೇಡ ಆದರೆ ಜಾಗೃತಿ ವಹಿಸಬೇಕಿದೆ ಎಂದರು.
ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯದಲ್ಲಿ ಸಹಕರಿಸಿದರು.

error: