September 14, 2024

Bhavana Tv

Its Your Channel

ಸಿಡಿಲು ಬಡಿದು ಮರಕ್ಕೆ ಬೆಂಕಿ

ಭಟ್ಕಳ: ಭಾರಿ ಸದ್ದು ಮಾಡುತ್ತ ಬಂದ ಸಿಡಿಲೊಂದು ಜನವಸತಿ ಪ್ರದೇಶದಲ್ಲಿರುವ ತೆಂಗಿನ ಮರವೊಂದಕ್ಕೆ ಬಡಿದು ತೆಂಗಿನ ಮರ ಸುಟ್ಟು ಕರಕಲಾದ ಘಟನೆ ಶನಿವಾರ ರಾತ್ರಿ ೯ಗಂಟೆಗೆ ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಕುಕನೀರ್ ಗ್ರಾಮದ ಗೊಂಡರಕೇರಿಯಲ್ಲಿ ನಡೆದಿದೆ.

ಜಗದೀಶ್ ಅಣ್ಣಪ್ಪ ಗೊಂಡ ಎಂಬುವವರ ಮನೆಯ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದೆ. ಸಿಡಿಲಿನ ಅಬ್ಬರ ತುಂಬಾ ಭಯಾನಕವಾಗಿತ್ತು ಎಂದು ಜಗದೀಶ್ ಗೊಂಡ ಮಾಹಿತಿ ನೀಡಿದ್ದಾರೆ. ಮರಕ್ಕೆ ಬಿದ್ದ ಬೆಂಕಿ ಬೇರೆ ಕಡೆ ಹರಡುವ ಮುಂಚೆ ಅಗ್ನಿಶಾಮಕ ದಳದವರು ಬಂದು ನಂದಿಸಿದ್ದು ಹೆಚ್ಚಿನ ಅನಾಹುತ ನಡೆಯುವುದನ್ನು ತಪ್ಪಿಸಿದಂತಾಗಿದೆ

error: