June 15, 2024

Bhavana Tv

Its Your Channel

ಬೆಲ್ಲದ ಕೊಳೆ- ಅಬಕಾರಿ ದಾಳಿ – ಜಪ್ತು

ಹೊನ್ನಾವರ ತಾಲೂಕಿನ ಜಲವಳ್ಳಿ ಗ್ರಾಮದ ಯರಗೋಡು ಸರ್ಕಾರಿ ಅರಣ್ಯ ಪದೇಶದಲ್ಲಿ ಸಂಗ್ರಹಿಸಿದ ಬೆಲ್ಲದ ಕೊಳೆಯನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಜಪ್ತುಪಡಿಸಿ ನಾಶಪಡಿಸಿದ ಘಟನೆ ನಡೆದಿದೆ.

ಖಚಿತ ಮಾಹಿತಿಯ ಮೇರೆಗೆ ಯರಗೋಡುವಿನ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ೨೦ ಲೀ. ಸಾಮಥ್ರ‍್ಯದ ಮೂರು ಪ್ಲಾಸ್ಟೀಕ್ ಕೊಡದಲ್ಲಿ ಸುಮಾರು ೬೦ ಲೀ. ದಷ್ಟು ಬೆಲ್ಲದ ಕೊಳೆಯನ್ನು ದಾಸ್ತಾನು ಇಟ್ಟಿರುವುದನ್ನು ಅಬಕಾರಿ ನಿರೀಕ್ಷಕ ದಾಮೋದರ್ ನಾಯ್ಕ ನೇತ್ರತ್ವದ ತಂಡ ಪತ್ತೆಹಚ್ಚಿ, ಮೊಕದ್ದಮೆಯನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿತರು ನಾಪತ್ತೆಯಾಗಿದ್ದು ಒಟ್ಟು ರೂ. ೧,೫೦೦/ . ಮೌಲ್ಯದ ಬೆಲ್ಲದ ಕೊಳೆಯನ್ನು ಜಪ್ತುಪಡಿಸಿದ್ದಾರೆ.
ಜಿಲ್ಲಾ ಅಬಕಾರಿ ಉಪ-ಆಯುಕ್ತ ವೈ ಆರ್ ಮೋಹನ್ ರವರ ಮಾರ್ಗದರ್ಶನದ ಮೇರೆಗೆ ಹಾಗೂ ಹೊನ್ನಾವರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕ ಸಂತೋಷ ಕುಡಾಲಕರ್ ರವರ ನೇತೃತ್ವದಲ್ಲಿ ಅಬಕಾರಿ ನೀರಿಕ್ಷಕ ದಾಮೋದರ್ ನಾಯ್ಕ ,ಹೊನ್ನಾವರ ವಲಯ ಮತ್ತು ಅಬಕಾರಿ ಉಪ ನಿರೀಕ್ಷಕ ಗಂಗಾಧರ್ ಅಂತರಗಟ್ಟಿ , ಅಬಕಾರಿ ರಕ್ಷಕರಾದ , ಡಿ. ಬಿ ತಳೇಕರ್ ರಮೇಶ ರಾಠೋಡ್, ಹಾಲಸಿದ್ದಪ್ಪ ಕುರಿಹುಲಿ, . ಮುತ್ತೇಪ್ಪ ಬುಗಡಿಕಟ್ಟಿ, ವಿಕ್ರಮ ವಾಸು ಬೀಡಿಕರ್, ಹಾಗೂ ವಾಹನ ಚಾಲಕರಾದ ಸಯ್ಯದ್ ಹಮೀದ್ ಮತ್ತು ಸಿದ್ರಾಮಪ್ಪ ಹೊಳೆಪ್ಪಗೋಳ ಇವರು ದಾಳಿಯಲ್ಲಿ ಪಾಲ್ಗೊಂಡಿರುತ್ತಾರೆ.

error: