September 17, 2024

Bhavana Tv

Its Your Channel

ಕೊಂಕಣಿ ಖಾರ್ವಿ ಸಮಾಜದವರಿಂದ ೩೦೦೦ ರೂಪಾಯಿಗಳ ಆಹಾರ ಸಾಮಗ್ರಿಗಳ ಕಿಟ್ ವಿತರಣೆ.

ಭಟ್ಕಳ ತಾಲ್ಲೂಕಿನಲ್ಲಿ ಕೊಂಕಣಿ ಖಾರ್ವಿ ಸಮಾಜದಲ್ಲಿ ವಾಸಿಸುತ್ತಿರುವ ಸಮಾಜ ಬಂಧುಗಳ ಪ್ರತಿಯೊಂದು ಕುಟುಂಬಗಳಿಗೆ ಲಾಕಡೌನ ಈ ಸಂಕಷ್ಟ ಸಂಧರ್ಭದಲ್ಲಿ ಕೊಂಕಣಿಖಾರ್ವಿ ಸಮಿತಿ ಭಟ್ಕಳ ರವರಿಂದ ಸುಮಾರು ಮೂರು ಸಾವಿರ ರೂಪಾಯಿಗಳ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ೫೦ ಕೆ.ಜಿ ಅಕ್ಕಿ ಸೇರಿದಂತೆ ನಿತ್ಯ ಬಳಕೆಯ ಅವಶ್ಯ ಸಾಮಾಗ್ರಿಗಳ ಕಿಟ್ ಪ್ರತಿಯೊಂದು ಕುಟುಂಬಗಳಿಗೂ ನೀಡಲಾಗಿದೆ. ಭಟ್ಕಳ ಬಂದರಿನ ಮಾವಿನಕುರ್ವೆ,ಬೆಳ್ನಿ, ಕರಿಕಲ್,ತಲಗೋಡ ಹಾಗೂ ಇನ್ನಿತರ ಪ್ರದೇಶದಲ್ಲಿ ವಾಸಿಸುವ ೪೫೫ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಅಲ್ಲದೇ ಭಟ್ಕಳ ತಾಲ್ಲೂಕಿನ ಬೈಲೂರು ಭಾಗದಲ್ಲಿ ವಾಸಿಸುವ ಸುಮಾರು ೨೫ ಕುಟುಂಬಗಳಿಗೆ ಸುಮಾರು ಎರಡು ಸಾವಿರ ರೂಪಾಯಿಗಳ ೨೫ ಕೆಜಿ ಅಕ್ಕಿ ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಸಮಾಜ ಬಂಧುಗಳು ತೀವ್ರ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಭಟ್ಕಳದ ಸಮಾಜದ ಸಮಿತಿಯ ಸ್ಪಂದನೆಗೆ ಕೊಂಕಣಿ ಖಾರ್ವಿ ಸಮಾಜದ ಹಿರಿಯ ಮುಖಂಡರು ಹಾಗೂ ಸಂಘದ ಪ್ರತಿನಿಧಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

error: