November 21, 2024

Bhavana Tv

Its Your Channel

ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ಯುವಜನರಿಂದ ಅದ್ದೂರಿಯಾಗಿ ನಡೆದ 25 ಮೀಟರ್ ಉದ್ದದ 03 ರಾಷ್ಟ್ರಧ್ವಜಗಳ ತಿರಂಗಾ ಮೆರವಣಿಗೆ

ಕೃಷ್ಣರಾಜಪೇಟೆ :- ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ಯುವಜನರಿಂದ ಅದ್ದೂರಿಯಾಗಿ ನಡೆದ 25 ಮೀಟರ್ ಉದ್ದದ 03 ರಾಷ್ಟ್ರಧ್ವಜಗಳ ತಿರಂಗಾ ಮೆರವಣಿಗೆ .. ಯುವಜನರು ರಾಷ್ಟ್ರಪ್ರೇಮ ಬೆಳಸಿಕೊಳ್ಖಲು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಪ್ರಚಾರಕ ಜಗಧೀಶ್ ಕಾರಂತ್ ಕರೆ .. ಮುಗಿಲು ಮುಟ್ಟಿದ ಸಂಭ್ರಮ.. ಮೊಳಗಿದ ರಾಷ್ಟ್ರಭಕ್ತಿಯ ಜಯಘೋಷಗಳು .

ಯುವಜನರು ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು.. ದೇಶದ ಏಕತೆ, ಅಖಂಡತೆ ಹಾಗೂ ದೇಶದ ಜನರ ನೆಮ್ಮದಿಗೆ ಭಂಗತರುವ ಕಿಡಿಗೇಡಿಗಳು ಹಾಗೂ ರಾಷ್ಟ್ರದ್ರೋಹಿಗಳ ಬಗ್ಗೆ ಯುವಜನರು ಸದಾ ಜಾಗೃತರಾಗಿರಬೇಕು ಎಂದು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಪ್ರಚಾರಕ ಜಗಧೀಶ್ ಕಾರಂತ್ ಕರೆ ನೀಡಿದರು..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಭಾರತ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಯುವಜನರ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ತಿರಂಗಾ ಮೆರವಣಿಗೆಯಲ್ಲಿ ಭಾಗವಹಿಸಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು..

ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆಯುತ್ತಿದ್ದರೂ ಭಾರತೀಯರಾದ ನಾವು ನಮ್ಮ ದೇಶ ಹಾಗೂ ನಮ್ಮ ರಾಷ್ಟ್ರಧ್ವಜ ಸೇರಿದಂತೆ ರಾಷ್ಟ್ರೀಯ ಭಾವೈಕ್ಯತೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಮುನ್ನಡೆದು ಸಮಾನತೆಯಿಂದ ಕೂಡಿರುವ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ ಜಗಧೀಶ್ ಕಾರಂತ್ ಬ್ರಿಟೀಷರ ಕಪಿಮುಷ್ಠಿ ಹಾಗೂ ದಾಸ್ಯದಿಂದ ಭಾರತ ದೇಶವು ಬಿಡುಗಡೆಯಾಗಲು ಕೋಟ್ಯಂತರ ರಾಷ್ಟ್ರಭಕ್ತರು ತಮ್ಮ ಜೀವ ಹಾಗೂ ಜೀವನವನ್ನೇ ಬಲಿಕೊಟ್ಟಿದ್ದಾರೆ. ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ಕಿತ್ತೂರ ರಾಣಿ ಚನ್ನಮ್ಮ ಸೇರಿದಂತೆ ಹಲವಾರು ಮಗನೀಯರು ಬ್ರಿಟೀಷರ ವಿರುದ್ಧ ಹೋರಾಡಿ ವೀರಮರಣವನ್ನು ಅಪ್ಪಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ವಿಶ್ವದ ಪ್ರಭಲ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಭಾರತ ದೇಶವು ಸಂಪದ್ಭರಿತ ರಾಷ್ಟ??ವಾಗಿದ್ದು
ವಿಶ್ವಕ್ಕೆ ಮಾದರಿಯಾದ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಹೊಂದಿದೆ. ಭಾರತ ದೇಶವು ವಿಶ್ವಗುರುವಾಗಿ ಪ್ರಜ್ವಲಿಸುತ್ತಿರುವ ಸಂದರ್ಭದಲ್ಲಿ ಹಿರಿಯರು ಹೋರಾಟದ ಮೂಲಕ ನಮಗೆ ತಂದುಕೊಟ್ಟ ಸ್ವಾತಂತ್ರ‍್ಯವನ್ನು ಸ್ವೇಚ್ಛಾಚಾರಕ್ಕೆ ಹಾಗೂ ತೋರಿಕೆಗೆ ಯುವಜನರು ಬಳಸಿ ಕಾಟಾಚಾರಕ್ಕಾಗಿ ರಾಷ್ಟ್ರಪ್ರೇಮವನ್ನು ಅನುಸರಿಸದೇ ಶಿಸ್ತು ಸಂಯಮ ಹಾಗೂ ಬದ್ಧತೆಯನ್ನು ಮೈಗೂಡಿಸಿಕೊಂಡು ನೈಜ ರಾಷ್ಟ್ರಭಕ್ತರಾಗಿ ರಾಷ್ಟ್ರಪ್ರೇಮಿಗಳಾಗಿ ಹೊರಹೊಮ್ಮಬೇಕು. ನಮ್ಮ ರಕ್ತದ ಕಣಕಣದಲ್ಲಿಯೂ ದೇಶಪ್ರೇಮವನ್ನು ಮೈಗೂಡಿಸಿಕೊಂಡು ದೇಶಭಕ್ತಿಯನ್ನು ಅನಾವರಣಗೊಳಿಸಲು ಶ್ರಮ ಪಡಬೇಕು ಎಂದು ಜಗಧೀಶ್ ಕಾರಂತ್ ಕರೆ ನೀಡಿದರು..

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ರಾಂತ ಸೈನಿಕ ಸುಕುಮಾರ್.ಕೆ ಮಾತನಾಡಿ ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳು ಕಳೆಯುತ್ತಿರುವ ಸುಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯರು ಕೂಡ ರಾಷ್ಟ್ರಭಕ್ತರಾಗಿ, ರಾಷ್ಟ್ರಪ್ರೇಮಿಗಳಾಗಿ ಬದಲಾಗುವ ಮೂಲಕ ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಬೇಕು. 75ನೇ ಭಾರತ ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಸಡಗರ ಸಂಭ್ರಮದಿAದ ಹಬ್ಬದಂತೆ ಆಚರಿಸಬೇಕು. ದೇಶದ ಸ್ವಾತಂತ್ರ‍್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಹುತಾತ್ಮರಾದ ಮಹನೀಯರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಮಾದರಿಯಾಗಿ ಸಮೃದ್ಧ ಸ್ವಾಭಿಮಾನಿ ಜೀವನ ನಡೆಸಬೇಕು ಎಂದು ಸುಕುಮಾರ್ ಕರೆ ನೀಡಿದರು..

ಹಿಂದೂ ಜಾಗರಣಾ ವೇದಿಕೆಯ ತಾಲ್ಲೂಕು ಸಂಚಾಲಕರಾದ ಸತೀಶ್ ಕುಮಾರ್, ಜಯಂತ್, ಪ್ರವೀಣ್, ಮುರುಗೇಶ್, ಕೊರಟಿಕೆರೆ ಗಣೇಶ್, ಕೆ.ಕಾಳೇಗೌಡ, ಶ್ರೀನಿವಾಸ್ ಕೇಸರಿ, ರವಿಶಿವಕುಮಾರ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಹಾಗೂ ಯುವಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ದೀಪಕ್, ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ನಿರಂಜನ್ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

.

error: