February 1, 2023

Bhavana Tv

Its Your Channel

ಯೋಧರಿಗೆ ಗೌರವ ಸಲ್ಲಿಸುವ ಮೂಲಕ 75 ನೇ ಸ್ವತಂತ್ರ ದಿನಾಚರಣೆಯನ್ನು ಅರ್ಧಪೂರ್ಣವಾಗಿ ಆಚರಣೆ

ಕಿಕ್ಕೇರಿ:– ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯೋಧರಿಗೆ ಗೌರವ ಸಲ್ಲಿಸುವ ಮೂಲಕ 75 ನೇ ಸ್ವತಂತ್ರ ದಿನಾಚರಣೆಯನ್ನು ಅರ್ಧಪೂರ್ಣವಾಗಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು

ಕೃಷ್ಣರಾಜಪೇಟೆ ತಾಲ್ಲೂಕಿನ ಮಾರೇನಹಳ್ಳಿ ಸರ್ಕಾರಿ ಪ್ರಾಥಮಿಕ ಕೇಂದ್ರದಲ್ಲಿ 75 ನೇ ಸ್ವತಂತ್ರ ದಿನವನ್ನು ವೀರಯೋಧರಾದ ಮನೋಜ್, ದಾಸಪ್ಪಶೆಟ್ಟಿ, ಲೋಕೇಶ್ ರವರು ಧ್ವಜಾರೋಹಣ ನೇರೆವೇರಿಸಿದರು,

ನಂತರ ಮಹಾತ್ಮರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಆಧುನಿಕ ಭಾರತಕ್ಕೆ ಸ್ವಾತಂತ್ರ‍್ಯದ ಅಧ್ಯಾಯವನ್ನು ಅವರ ಅತ್ಯುನ್ನತ ತ್ಯಾಗ ಬರೆದ ವೀರರಿಗೆ ನಮಸ್ಕರಿಸೋಣ. ಈ ಸ್ವಾತಂತ್ರ‍್ಯ ದಿನದಂದು ನೀವು ಉಲ್ಲಾಸ ಮತ್ತು ಬೆಳಕನ್ನು ಆಧುನಿಕ ಭಾರತಕ್ಕೆ ಸ್ವಾತಂತ್ರ‍್ಯದ ಅಧ್ಯಾಯವನ್ನು ಅವರ ಅತ್ಯುನ್ನತ ತ್ಯಾಗ ಬರೆದ ವೀರರಿಗೆ ನಮಿಸೋಣ ಎಂದರು..

ಅಲ್ಲದೇ ಇದೇ ಸಂದರ್ಭದಲ್ಲಿ ವೀರ ಯೋಧರಿಗೆ, ಹಾಗೂ ಪತ್ರಕರ್ತರಿಗೆ ಕೋರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಮಾಜ ಸೇವಕರಾದ ಸೊಳ್ಳೇಪುರ ಗಿರಿಪ್ರಸಾದ ರವರಿಗೆ ರಾಷ್ಟ್ರ ದ್ವಜ ನೀಡಿ ಹೃದಯಸ್ಪರ್ಶಿ ಸನ್ಮಾನಿಸಿದ್ರು..

ಕಾರ್ಯಕ್ರಮದಲ್ಲಿ ಮಾರೇನಹಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರದ ವೃದ್ಯಾದಿಕಾರಿಗಳಾದ ಶ್ರೀಮತಿ ಹರ್ಷವರ್ದಿನಿ ಗೀರಿಪ್ರಸಾಧ್, ಮುಖಂಡರಾದ ಲೋಕೇಶ್, ಆದಿ, ಅಭಿ, ಸೇರಿದಂತೆ ಸ್ಥಳಿಯ ಮುಖಂಡರುಗಳು ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರುಗಳು ಇದ್ದರು..

ವರದಿ: ಶಂಭು ಕಿಕ್ಕೇರಿ

About Post Author

error: