ಭಟ್ಕಳ : ಕೊರೋನಾ ಸೋಂಕಿನ ಶಂಕೆಯ ಮೇಲೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದವರ ಪೈಕಿ ಏಳು ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎನ್ನಲಾಗಿದೆ .
ನಿನ್ನೆ ಒಂದೇ ದಿನ 12 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು , ಅವರ ಸಂಪರ್ಕದಲ್ಲಿದ್ದ ಸುಮಾರು 60 ಜನರ ಗಂಟಲು ದ್ರವದ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು . ಅದರಂತೆ , ನಿನ್ನೆ ದೃಢಪಟ್ಟಿದ್ದವರಲ್ಲಿನ ವ್ಯಕ್ತಿಯೊಬ್ಬರ ಕುಟುಂಬದ ಆರು ಮಂದಿಗೆ ಹಾಗೂ ಅವರ ಸ್ನೇಹಿತರೊಬ್ಬರನ್ನು ಸೇರಿ ಒಟ್ಟು ಏಳು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದ್ದು , ಈ ಬಗ್ಗೆ ಮಧ್ಯಾಹ್ನ 12 ಗಂಟೆಗೆ ಬರಲಿರುವ ಹೆಲ್ತ್ ಬುಲೆಟಿನ್ ನಲ್ಲಿ ಖಚಿತವಾಗಲಿದೆ . ಸದ್ಯ ಇಂದು ದೃಢಪಟ್ಟವರು ನಗರದ ಹೃದಯ ಭಾಗದ ಓಣಿಯಲ್ಲಿದ್ದವರು ಎನ್ನಲಾಗಿದ್ದು , ಇದು ಮತ್ತಷ್ಟು ಆತಂಕ ಸೃಷ್ಟಿಗೆ ಕಾರಣವಾಗಿದೆ . ಈ ಏಳು ಮಂಧಿಯಲ್ಲಿನ ಸೋಂಕಿನ ಪ್ರಕರಣ ದೃಢಪಟ್ಟರೆ ಸದ್ಯ ಪಟ್ಟಣವೊಂದರಲ್ಲೇ ಒಟ್ಟು 31 ಪ್ರಕರಣಗಳು ಪತ್ತೆಯಾದಂತಾಗುತ್ತದೆ . 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು , ಸದ್ಯ 20 ಸಕ್ರಿಯ ಪ್ರಕರಣಗಳು ಇದ್ದಂತಾಗಿದೆ . ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಇದೀಗ ಭಟ್ಕಳ ಮಾತ್ರವಲ್ಲ , ಇಡೀ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ .
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.