ಹೊನ್ನಾವರ : ಮುಂಗಡವಾಗಿ ತೆರಿಗೆ ತುಂಬುತ್ತ ಮಳೆಗಾಲದಲ್ಲಿ ಹಾನಿಯಾದರೂ ಸರಕು ಸಾಗಾಣಿಕೆ ಮತ್ತು ಪ್ರಯಾಣಿಕರನ್ನು ಸಾಗಿಸುತ್ತ ಗುಡ್ಡಗಾಡು ಪ್ರದೇಶವಾದ ಉತ್ತರ ಕನ್ನಡಕ್ಕೆ ಸೇವೆ ನೀಡುತ್ತಿರುವ ಖಾಸಗಿ ಲಾರಿ, ಬಸ್, ಟೆಂಪೋ, ಟ್ಯಾಕ್ಸಿಗಳನ್ನು ಸಾಲಮಾಡಿ ಖರೀದಿಸುವ ವ್ಯವಹಾರಸ್ಥರು ಲಾಕ್‌ಡೌನ್‌ನಿಂದ ಸಂಪೂರ್ಣ ಹಾನಿಯಲ್ಲಿದ್ದಾರೆ. ರೈತ, ಉದ್ಯಮಿ ಇತರ ವರ್ಗಗಳಿಗೆ ರಿಯಾಯತಿ ನೀಡಿದಂತೆ ತಮಗೂ ಏನಾದರೂ ಸರ್ಕಾರಗಳ ನೆರವು ದೊರೆಯಬಹುದು ಎಂದು ನಿರೀಕ್ಷಿಸಿದವರಿಗೆ ನಿರಾಸೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯ ಪ್ರಮುಖ, ನೂರಾರು ಬಸ್ ಲಾರಿ, ಮಿನಿಲಾರಿಗಳನ್ನು ಓಡಿಸುತ್ತಿರುವ ಸಾರಿಗೆ ಉದ್ಯಮಿ ವೆಂಕಟ್ರಮಣ ಹೆಗಡೆ ಮಾತನಾಡಿ ಕೋವಿಡ್ ಭಯ ಇದ್ದರೂ ಸರ್ಕಾರ ಹೇಳಿದಂತೆ ತರಕಾರಿ, ಕಿರಾಣಿ, ಸಾಮಾನು, ಗ್ಯಾಸ್, ಔಷಧ ಮೊದಲಾದವನ್ನು ನಮ್ಮಲ್ಲಿ ಕೆಲವರು ಸಾಗಿಸುತ್ತ ಲಾಕ್‌ಡೌನ್‌ಗೆ ಸಹಕಾರ ನೀಡಿದ್ದಾರೆ. ನಾವು ಎಷ್ಟೇ ಕಷ್ಟವಾದರೂ ವಾಹನವನ್ನು ನಿಲ್ಲಿಸಿ ಲಾಕ್‌ಡೌನ್‌ಗೆ ಸಹಕಾರ ನೀಡಿದ್ದೇವೆ. ವಾಹನಗಳ ಚಕ್ರ ತಿರುಗದಿದ್ದರೆ ಕಾರ್ಮಿಕರ ಸಂಬಳವೂ ಗಿಟ್ಟುವುದಿಲ್ಲ. ಲಾಕ್‌ಡೌನ್ ಮುಗಿದರೂ ಸಾರಿಗೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಕಡಿಮೆ ಸೀಟ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಸಾಗಿಸಲು ಹೊರಟರೆ ಟಿಕೆಟ್ ದರವನ್ನು ಎರಡುಪಟ್ಟು ಹೆಚ್ಚಿಸಬೇಕಾಗುತ್ತದೆ. ಇದರಿಂದ ಜನರ ಸುಲಿಗೆ ಮಾಡಿದಂತಾಗುತ್ತದೆ, ಬರುವುದು ಮಳೆಗಾಲ, ದೀಪಾವಳಿಯವರೆಗೆ ಶೇ. ೫೦ರಷ್ಟು ವ್ಯವಹಾರ ಕುಸಿಯುತ್ತದೆ. ಆದ್ದರಿಂದ ಎಲ್ಲ ಚಟುವಟಿಕೆಗಳೊಂದಿಗೆ ವಾಹನ ಚಟುವಟಿಕೆಗಳು ಆರಂಭವಾಗದಿದ್ದರೆ ಪ್ರಗತಿ ಅಸಾಧ್ಯ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ರಸ್ತೆ ತೆರಿಗೆ ಮನ್ನಾದಂತಹ ಕ್ರಮ ಕೈಗೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ. ಅಂಕೋಲೆಯ ವಂದನಾ, ಗೋಕರ್ಣದ ಗೌರಿ, ಕುಮಟಾದ ವಿಎಂಪಿ ಮತ್ತು ಟೆಂಪೋ ಚಾಲಕ, ಮಾಲಕ ಸಂಘಟನೆಯ ಅಧ್ಯಕ್ಷರು ಅವರ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ.
More Stories
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ
ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ
ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿ