ಹೊನ್ನಾವರ : ಮದ್ಯದಂಗಡಿಗಳು ಬಂದ್ ಆಗಿದ್ದರೂ ಹುಟ್ಟು ಚಟ ಸಾರ್ವಭೌಮರು ಕುಡಿತವನ್ನು ಕಡಿಮೆ ಮಾಡಲೇ ಇಲ್ಲ. ಕೋಕಂ, ಗೇರುಹಣ್ಣಿನ ಮದ್ಯಗಳು ಚಂದಾವರ, ಮೂಡ್ಕಣಿ ಮೊದಲಾದ ಭಾಗಗಳಿಂದ ಸರಬರಾಜಾದವು. ಕಾರವಾರದ ಗಡಿ ದಾಟಿ ಗೋವಾ ಫೆನ್ನಿ ಬಂತು. ಇದನ್ನು ವಿತರಿಸುವವರು ಅನಧಿಕೃತ ವಿತರಕರಿಗೆ ಹಂಚಿದರು. ಕುಡಿಯುವವನಿಗೆ ಮೂರುಪಟ್ಟು ದರವಾಯಿತು. ಸರ್ಕಾರ ತೆರಿಗೆಗಾಗಿ ಮದ್ಯದಂಗಡಿ ತೆರೆದಿದ್ದು ದೊಡ್ಡ ಸುದ್ದಿಯಾಯಿತು, ಕಳ್ಳ ಸರಾಯಿ ಕುಡಿದವರು ಸದ್ದಿಲ್ಲದೇ ಮನೆ ಸೇರುತ್ತಿದ್ದರು, ಈಗ ಅಧಿಕೃತವಾಗಿ ಬೊಬ್ಬೆ ಹೊಡೆದರು ಅಷ್ಟೆ.
೫ರೂಪಾಯಿ ಮದು, ತಂಬಾಕಿನ ಪ್ಯಾಕೇಟ್ ೨೫ರೂಪಾಯಿಗೆ ಈಗಲೂ ಮಾರಾಟವಾಗುತ್ತಿದೆ. ಸ್ಟಾರ್ ಮೊದಲಾದ ಗುಟ್ಕಾಗಳು ಪ್ಯಾಕೆಟ್‌ಗೆ ೨ರೂಪಾಯಿಯಿಂದ ೫ರೂಪಾಯಿಗೆ ಮಾರಾಟವಾಗುತ್ತಿದೆ. ಒಂದೆಡೆ ಇವುಗಳ ಉತ್ಪಾದನೆ ಕಡಿಮೆಯಾಗಿದೆ, ಬೇಡಿಕೆಗೆ ತಕ್ಕ ಪೂರೈಕೆಯಿಲ್ಲ, ಮಾತ್ರವಲ್ಲ ಜಿಲ್ಲೆಯಲ್ಲಿ ಗುಟ್ಕಾ ನಿಷೇಧಿಸಲಾಗಿದೆ. ಇದನ್ನು ತಡೆಯಬೇಕಾದ ಅಬಕಾರಿಗಳು ಮತ್ತು ಆರೋಗ್ಯ ಇಲಾಖೆಯ ತಪಾಸಕರು ಅಲ್ಲೊಂದು, ಇಲ್ಲೊಂದು ೧೦ಲೀಟರ್ ಸಾರಾಯಿ, ೧೦ಗುಟ್ಕಾ ಪ್ಯಾಕೆಟ್ ಹಿಡಿದು ಗ್ರೂಪ್ ಫೋಟೊ ಪತ್ರಿಕೆಯಲ್ಲಿ ಹಾಕಿಸಿಕೊಂಡರು.
ಹಿರಿಯ ಜಾನಪದ ವಿದ್ವಾಂಸೆ ಶ್ರೀಮತಿ ಶಾಂತಿ ನಾಯಕ ಚಟಸಾರ್ವಭೌಮರ ಆಟಾಟೋಪ ಮತ್ತು ಅವರ ಕುಟುಂಬದ ದುರಂತವನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಈ ಕುರಿತು ೩೦ವರ್ಷಗಳಿಂದ ಅಮೇರಿಕಾದಲ್ಲಿರುವ ಕರ್ಕಿ ಆನಂದ ಹಾಸ್ಯಗಾರ ಹೀಗೆ ಪ್ರತಿಕ್ರಿಯಿಸಿದ್ದಾರೆ, ಸ್ವಾತಂತ್ರö್ಯ ಬಂದಾಗ ಮದ್ಯಪಾನ ನಿಷೇಧಿಸಿದ್ದನ್ನು ಮುಂದುವರಿಸಿದ್ದರೆ ಹೀಗಾಗುತ್ತಿರಲಿಲ್ಲ. ಈಗ ಕುಡಿಯುವವ ೪೦ದಿನ ಕುಡಿಯದಿದ್ದರೂ ಏನು ಆಗಲಿಲ್ಲ. ಆದರೆ ಸರ್ಕಾರ ಅಂಗಡಿ ತೆರೆದು ಮಾರದಿದ್ದರೆ ಉಳಿಯುವ ಲಕ್ಷಣ ಇರಲಿಲ್ಲ. ಇನ್ನು ನಿಧಾನವಾಗಿ ಇದನ್ನು ನಿಯಂತ್ರಿಸುತ್ತ, ಈ ಆದಾಯ ಇಲ್ಲದಿದ್ದರೂ ಸರ್ಕಾರ ನಡೆಯುವಂತೆ ಪರ್ಯಾಯ ಮೂಲವನ್ನು ಕಂಡುಕೊAಡರೂ ಮೂರು ತಲೆಮಾರು ಕಳೆದ ಮೇಲೆ ಮದ್ಯಪಾನಿಗಳ ಸಂಖ್ಯೆ ಕಡಿಮೆಯಾಗಬಹುದು. ಅಲ್ಲಿಯವರೆಗೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದಾಯಕವಾಗಿ ಮದ್ಯಸೇವನೆಯನ್ನು ಬಿಡಿಸುತ್ತಿರುವ, ಮದ್ಯದ ದುರಂತವನ್ನು ಕಂಡು ಮರುಗುತ್ತಿರುವ ಡಾ. ವೀರೇಂದ್ರ ಹೆಗಡೆ, ಶಾಂತಿ ನಾಯಕ ಇವರ ಆಶಯ ಈಡೇರಲು ಮೂರು ತಲೆಮಾರು ಕಳೆಯಬೇಕು ಅಲ್ಲಿಯವರೆಗೆ ಸರ್ಕಾರ ಬಂದ್ ಆದರೆ ಲಾಕ್‌ಡೌನ್‌ನಲ್ಲಿ ಆದಂತೆ ರಾಜಕೀಯ ಪುಡಾರಿಗಳ ಪ್ರಾಯೋಜಿತ ಕಳ್ಳಬಟ್ಟಿ, ಗೋವಾ ಫೆನ್ನಿ, ನಕಲಿ ಗುಟ್ಕಾ ಹಾವಳಿ ಆರಂಭವಾಗುತ್ತದೆ.
More Stories
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ
ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ
ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿ