
ಭಟ್ಕಳ: ಪಟ್ಟಣದಲ್ಲಿ ಇಂದು ಮತ್ತೆ ಏಳು ಮಂದಿಯಲ್ಲಿ ಕೋವಿಡ್- ೧೯ ಸೋಂಕು ದೃಢಪಟ್ಟಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್
ಬುಲೆಟಿನ್ ನಲ್ಲಿ ಖಚಿತಪಡಿಸಿದೆ.ನಿನ್ನೆ ಒಂದೇ ದಿನ ೧೨ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ ಸುಮಾರು ೬೦ ಜನರ ಗಂಟಲು ದ್ರವದ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಂತೆ, ನಿನ್ನೆ ದೃಢಪಟ್ಟಿದ್ದ ೧೮ ವರ್ಷದ ಯುವತಿಯ ಕುಟುಂಬದ ಆರು ಹಾಗೂ ಆಕೆಯ ಸ್ನೇಹಿತರೊಬ್ಬರನ್ನು ಸೇರಿ ಒಟ್ಟು ಏಳು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.ಒಂದೂವರೆ ವರ್ಷದ ಬಾಲಕಿ, ಎರಡು ವರ್ಷ ಆರು ತಿಂಗಳ ಬಾಲಕಿ, ೧೭ ವರ್ಷದ ಬಾಲಕಿ , ೨೩ ವರ್ಷದ ಯುವತಿ, ೬೫, ೬೮ ವರ್ಷದ ವೃದ್ಧ ಹಾಗೂ ೫೦ ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಇಂದು ದೃಢಪಟ್ಟವರು ನಗರದ ಹೃದಯ ಭಾಗದ ಓಣಿಯಲ್ಲಿದ್ದವರು ಎನ್ನಲಾಗಿದ್ದು, ಇದು ಮತ್ತಷ್ಟು ಆತಂಕ ಸೃಷ್ಟಿಗೆ ಕಾರಣವಾಗಿದೆ.

ಈ ಏಳು ಮಂದಿಯಲ್ಲಿ ಸೋಂಕಿನ ಪ್ರಕರಣ ದೃಢಪಡುವ ಮೂಲಕ ಸದ್ಯ ಪಟ್ಟಣವೊಂದರಲ್ಲೇ ಒಟ್ಟು ೩೧ ಪ್ರಕರಣಗಳು ಪತ್ತೆಯಾದಂತಾಗಿದೆ. ೧೧ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಸದ್ಯ ೨೦ ಸಕ್ರಿಯ ಪ್ರಕರಣಗಳು ಇವೆ.ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಇದೀಗ ಭಟ್ಕಳ ಮಾತ್ರವಲ್ಲ, ಇಡೀ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.