September 14, 2024

Bhavana Tv

Its Your Channel

ಕರೋನಾ ಸುರಕ್ಷತೆಗಾಗಿ ಉತ್ತರಕನ್ನಡದ ವಿವಿಧೆಡೆ ವಿನಾಯತಿ

ಉತ್ತರಕನ್ನಡ ಜಿಲ್ಲೆಯಾದ್ಯಂತ ಜನಜೀವನ ಸುಧಾರಿಸುವದಕ್ಕೆ ಹಾಗೂ ಆರ್ಥಿಕ ಪ್ರಗತಿಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವಾರು ವಿನಾಯಿತಿ ನೀಡಲಾಗಿತ್ತು.

ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಟ್ಕಳ ತಾಲೂಕಿನ ಕಟೆನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಎಲ್ಲಾ ತಾಲೂಕಿನ ಪಟ್ಟಣ, ಗ್ರಾಮೀಣ ಪ್ರದೇಶಗಳಿಗೆ ಈ ಕೆಳಕಂಡ ವಿನಾಯಿತಿ ನೀಡಲಾಗಿದೆ.

ಕುಮಟಾ ತಾಲೂಕಿನ ಗೋಕರ್ಣ ಹಾಗೂ ಶಿರಸಿ ತಾಲೂಕಿನ ಬನವಾಸಿ, ಪಂಚಾಯತ ವ್ಯಾಪ್ತಿಗೆ ಒಳಪಡುವ ಪ್ರದೇಶವಾಗಿರುವುದರಿಂದ. ಅದಕ್ಕೆ ಪಂಚಾಯತ ಮಟ್ಟದ ವಿನಾಯಿತಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ನೀಡಲಾಗಿದೆ.

ಐಸ್ ಕ್ರೀಂ ಪಾರ್ಲರಗಳಿಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ತೆರೆಯಲು ವಿನಾಯಿತಿ ನೀಡಲಾಗಿದೆ.

ಆಟೋ ಸಂಚಾರಕ್ಕೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ 1+1 ಅವಕಾಶವನ್ನು ನೀಡಲಾಗಿದೆ.

ಹೋಟೇಲಗಳಿಗೆ ಪಾರ್ಸಲ್ ನೀಡುವ ಸಮಯವನ್ನು ವಿಸ್ತರಿಸಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮುಂದುವರಿಸಲಾಗಿದೆ

error: