October 5, 2024

Bhavana Tv

Its Your Channel

ಭಟ್ಕಳದ ಮತ್ತೋರ್ವ ಮಹಿಳೆಗೆ ಕೊರೋನಾ ಸೋಂಕು ಇಂದೇ 8 ಪ್ರಕರಣ ಪತ್ತೆ

ಭಟ್ಕಳ: ಪಟ್ಟಣದ ಮತ್ತೋರ್ವ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸಕ್ರಿಯ ಸೋಂಕಿತರ ಸಂಖ್ಯೆ 21ಕ್ಕೆ ಏರಿದಂತಾಗಿದೆ.

ಇಂದು ಬೆಳಿಗ್ಗಿನ ಬುಲೆಟಿನ್ ನಲ್ಲಿ 7 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಸಂಜೆ ವೇಳೆಗೆ 32 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದನ್ನ ಖಚಿತ ಪಡಿಸಲಾಗಿದೆ.

ಸೋಂಕಿತ ಮಹಿಳೆ ಕುಟುಂಬದ 8 ಜನರಿಗೆ ಹಾಗೂ ಕುಟುಂಬದ ಸಂಪರ್ಕದಲ್ಲಿದ್ದ 4ಜನರಿಗೆ ನಿನ್ನೆ ಸೋಂಕು ಧೃಡಪಟ್ಟಿತ್ತು. ಕಳೆದ ನಾಲ್ಕು ದಿನದ ಹಿಂದೆ ಇದೇ ಕುಟುಂಬದ 18 ವರ್ಷದ ಯುವತಿಗೆ ಕೊರೋನಾ ಸೋಂಕು ಕಂಡು ಬಂದಿತ್ತು.

ಮಹಿಳೆಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಇದೀಗ ಮಹಿಳೆಗೂ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಪರ್ಕದಿಂದ ಇನ್ನೂ ಕೆಲವರಿಗೆ ಸೋಂಕು ತಗಲಿರುವ ಸಾಧ್ಯತೆ ಇದೆ ಎನ್ನಲಾಗಿದೆ
ಪೋಲಿಸ್ ಇಲಾಖೆ ಹಾಗೂ ಜಿಲ್ಲಾಡಳಿತ ಭಟ್ಕಳವನ್ನು ಸೀಲ್ ಡೌನ್ ಮಾಡಿ ಹತೋಟಿಗೆ ತರಲು ಶ್ರಮಿಸುತ್ತಿದೆ

error: