December 4, 2024

Bhavana Tv

Its Your Channel

ಕಂದಾಯ ಇಲಾಖೆಯ ಕರೋನಾ ವಾರಿಯರ್ಸ್‍ಗೆ ಆಗುತ್ತಿರುವ ಅನ್ಯಾಯ ಬಗೆಹರಿಸುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ

ಭಟ್ಕಳ; ಕರೋನಾ ಸೊಂಕು ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಆತಂಕ ಹೆಚ್ಚಿಸಿದೆ. ಕೋವಿಡ್-19 ಸಂಬಂಧ ಸರ್ಕಾರವು ಆಗಾಗ ವಿವಿಧ ಆದೇಶ ಮತ್ತು ಸುತ್ತೋಲೆಗಳನ್ನು ಹೊರಡಿಸಿದ್ದು, ಅದರಂತೆ ಕೊರೋನಾ ಎಂಬ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು ಬಹಳ ಮಹತ್ವಪೂರ್ಣ ಮತ್ತು ನಿರ್ಣಾಯಕ ಪಾತ್ರವನ್ನು ನಿರ್ವಹಿಸಿರುತ್ತದೆ. ಅಂದರೆ ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದಾಗಿನಿಂದ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ವಯ ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಉಪ ತಹಶೀಲ್ದಾರರು, ತಹಶೀಲ್ದಾರರು ಹಾಗೂ ಉಪ ವಿಭಾಗಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಗೆ ಸೇರಿದ ಎಲ್ಲ ಸಿಬ್ಬಂದಿ ವರ್ಗದವರು ಕರೋನಾ ವೈರಸ್‍ನಿಂದ ತಮ್ಮ ಜೀವಕ್ಕೆ ಅಪಾಯವಿದೆ ಎನ್ನುವ ಅರಿವಿದ್ದರೂ ಸಹ ಸರ್ಕಾರದ ಆದೇಶಗಳನ್ನು ಪಾಲಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿರುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿಯೇ 12 ಜನ ಕರೋನಾ ಎಂಬ ಕಾಯಿಲೆಯ ಸೋಂಕಿತ ವ್ಯಕ್ತಿಗಳನ್ನು ಗುರುತಿಸಿದ್ದು ಹಾಗೂ ತಮ್ಮ ಕಂದಾಯ ವೃತ್ತಗಳ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು ಕರೋನಾ ಶಂಕಿತ ರೋಗಿಗಳನ್ನು ಗುರ್ತಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡಿಸಿ, ಅವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ವಲಸೆ ಕಾರ್ಮಿಕರನ್ನು ಗುರ್ತಿಸಿ ಅವರಿಗೂ ಸಹ ದೈನಂದಿನ ಎಲ್ಲ ಅವಶ್ಯಕತೆಗಳನ್ನು ಪೂರೈಸಲು ಹಾಗೂ ವಲಸೆ ಕಾರ್ಮಿಕರು ಲಾಕ್‍ಡೌನ್ ಸಮಯದಲ್ಲಿ ಒಂದೆಡೆಯಿಂದ ಮತ್ತೋಂದೆಡೆಗೆ ವಲಸೆ ಹೋಗದಂತೆ ಹಾಗೂ ತಾಲ್ಲೂಕು ವ್ಯಾಪ್ತಿಯ ಗಡಿಭಾಗಗಳಲ್ಲಿ ನಿರ್ಮಿಸಲಾಗಿರುವ ಚೆಕ್‍ಪೋಸ್ಟಗಳಲ್ಲಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಜೊತೆಗೆ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆಗೂ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನಿಭವಿಗಳಿಗೆ ಇ-ಡಿಜಿಗೋ ಮೂಖಾಂತರ ಹಣವನ್ನು ಮನೆಗೆ ತಲುಪಿಸುವ ಕಾರ್ಯದಲ್ಲಿ ಯಶಸ್ವಿಕಾಣಿಸಿದ್ದು, ಅಲ್ಲದೇ ಸರ್ಕಾರದ ಆದೇಶದಂತೆ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಸಿ ವರ್ಗದ ದೇವಸ್ಥಾನದ ಅರ್ಚಕರು/ಸಿಬಂದಿಗಳಗೆ ಆಹಾರ ಕಿಟ್‍ಗಳನ್ನು ಒದಗಿಸಲು ವರದಿ ಒಪ್ಪಿಸುವ ಕೆಲಸದಲ್ಲಿ ತೋರಿದ ನಿಷ್ಟತೆ ಹಾಗೂ ತಾಲೂಕಿನಲ್ಲಿ ಬಡವರ್ಗದವರಿಗೆ/ ಕೂಲಿ ಕಾರ್ಮಿಕರಿಗೆ, ಅಶಕ್ತರಿಗೆ ದುರ್ಬಲವರ್ಗದವರಿಗೆ ಅಗತ್ಯ ಸೇವೆಗಳು, ಆಹಾರದ ಕಿಟ್‍ಗಳನ್ನು ಮನೆಗೆ ಹೋಗಿ ತಲುಪಿಸುವ ಕಾರ್ಯದಲ್ಲಿ ಇಲಾಖೆಯು ಕ್ರಮ ಕೈಗೊಂಡಿರುತ್ತದೆ.
ಕ್ವಾರಂಟೈನ್ ವಾಚ್ ಆ್ಯಪ್, ಕ್ವಾರಂಟೈನ್ ಟ್ರೇಸಿಂಗ್ ಆ್ಯಪ್ ಮುಖಾಂತರ ಕ್ವಾರಂಟೈನಲ್ಲಿರುವ ಶಂಕಿತರ ವಿವರಗಳನ್ನು ದಿನಂಪ್ರತಿ ಆ್ಯಪ್ ಮೂಲಕ ವರದಿ ಒಪ್ಪಿಸಲು ಕ್ರಮಕೈಗೊಂಡಿರುತ್ತದೆ. ಲಾಕ್‍ಡೌನ್ ನಿಂದಾಗಿ ಸಾರ್ವಜನಿಕರಿಗೆ ತುರ್ತು ಸಂದರ್ಭಗಳಲ್ಲಿ ಮತ್ತು ಯಾವುದೇ ರೀತಿಯ ತೊಂದರೆಗಳು, ಸಂದೇಹಗಳು ಮತ್ತು ಮಾಹಿತಿ ವಿನಿಮಯಕ್ಕೆ 24*7 ಕರ್ತವ್ಯ ನಿರ್ವಹಣೆಗೆ ಸಹಾಯವಾಣಿ ಕೇಂದ್ರದಲ್ಲಿ ವಾರ್ ರೂಂಗಳಲ್ಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿರುವುದು, ಅಗತ್ಯ ಸೇವೆಗಳ ಪೂರೈಕೆದಾರರಿಗೆ ಮತ್ತು ವಾಹನಗಳಿಗೆ ಹಾಗೂ ವೈದ್ಯಕೀಯ ಚಿಕಿತ್ಸೆಗೆ ತೊಂದರೆಯಾಗದಂತೆ ಪಾಸ್ ನೀಡುವ ಜವಾಬ್ದಾರಿಯನ್ನು ಸಹ ಇಲಾಖೆಯು ನಿರ್ವಹಿಸಿರುತ್ತದೆ.

ಉಲ್ಲೇಖ(1) ರ ಸುತ್ತೋಲೆಯಲ್ಲಿ ಸರ್ಕಾರವು ಕಂದಾಯ ಇಲಾಖೆಯನ್ನು ಅಗತ್ಯ ಸೇವೆಗಳ ಪಟ್ಟಿಯಲ್ಲಿ ಸೇರಿಸಿದ್ದು, ಸ್ವಾಗತಾರ್ಹವೇ ಆಗಿದ್ದರೂ ಮೇಲೆ ವಿವರಿಸಿದಂತೆ ಕಂದಾಯ ಇಲಾಖೆ ಸಿಬ್ಬಂದಿಗಳು ತಮ್ಮ ಜೀವದ ಹಂಗನ್ನು ತೊರೆದು ಕೋವಿಡ್-19 ತುರ್ತ ಸಂದರ್ಭದಲ್ಲಿ ಹಗಲು-ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಉಲ್ಲೇಖ(2) ರಲ್ಲಿ ಕಂದಾಯ ಇಲಾಖೆಯನ್ನು ಮತ್ತು ಇತರೆ ಅಗತ್ಯ ಸೇವೆಗಳ ಕೆಲವು ಇಲಾಖೆಗಳನ್ನು ಹೊರತುಪಡಿಸಿ,
ಅ) ಅಂಗನವಾಡಿ ಕಾರ್ಯಕತೆಯರು/ಸಹಾಯಕರು,
ಆ) ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳು, ಹೋಮ್‍ಗಾಡ್ರ್ಸಗಳು, ಪೌರರಕ್ಷಣ ದಳ, ಅಗ್ನಿಶಾಮಕ
ದಳದ ನೌಕರರು/ಅಧಿಕಾರಿಗಳು, ಬಂಧೀಖಾನೆ ಸಿಬ್ಬಂದಿಗಳು
ಇ)ಪೌರಕಾರ್ಮಿಕರು/ಸ್ಯಾನಿಟೈಸರ್ ಕೆಲಸಗಾರರು, ಅವರಿಗೆ ಸಂಬಂಧಿಸಿದ ವಾಹನಗಳ
ಚಾಲಕರು/ಲೋಡರ್‍ಗಳು
ಕೇವಲ ಈ ಮೂರು ವರ್ಗಗಳ ನೌಕರರಿಗೆ ಮಾತ್ರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮಾರ್ಗಸೂಚಿಗಳಂತೆ ಕೋವಿಡ್-19 ಕೆಲಸದಲ್ಲಿ ಪಾಲ್ಗೊಂಡು, ಕೋವಿಡ್-19 ರೋಗದಿಂದ ಮೃತರಾದಲ್ಲಿ ರೂ.30 ಲಕ್ಷ ಪರಿಹಾರ ಒದಗಿಸು ಸರ್ಕಾರವು ಮಂಜೂರಾತಿ ನೀಡಿ ಆದೇಶಿಸಿರುತ್ತದೆ.
ಮೇಲೆ ತಿಳಿಸಿರುವಂತೆ ಕಂದಾಯ ಇಲಾಖೆಯ ನೌಕರರು ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಹಾಗೂ ಈ ನೌಕರರ ಕುಟುಂಬ ವರ್ಗದವರು ಸಂಪೂರ್ಣವಾಗಿ ಇವರನ್ನೇ ಅವಲಂಬಿಸಿರುವುದರಿಂದ ಸದರಿ ಕೋವಿಡ್-19 ಕರ್ತವ್ಯದಲ್ಲಿದ್ದಾಗ ಏನಾದರೂ/ತೊಂದರೆಗಳು ಸಂಭವಿಸಿದಲ್ಲಿ ಇವರನ್ನೇ ನೆಚ್ಚಿಕೊಂಡಿರುವ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆ ಇರುವುದರಿಂದ ಉಲ್ಲೇಖ(2) ರ ಸುತ್ತೋಲೆಯ ವ್ಯಾಪ್ತಿಗೆ ಕಂದಾಯ ಇಲಾಖೆಯನ್ನು ಸೇರಿಸಲು ಅಗತ್ಯ ಕ್ರಮ ಕ್ರಮ ಕೈಗೊಂಡು ರಾಜ್ಯದ ಕಂದಾಯ ಇಲಾಖೆ ನೌಕರರ ಹಿತವನ್ನು ಕಾಪಾಡುವಂತೆ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ ಮೂಲಕ‌ ಮನವಿ ಸಲ್ಲಿಸಿದರು.
ಈ‌‌ ಸಂದರ್ಭದಲ್ಲಿ ಶಿರಸ್ತೇದಾರ್ ಭಾಸ್ಕರ ಭಟ್ಟ,ಉಪ ತಹಶಿಲ್ದಾರರ ಸುರೇಶ್ ಚಳಕ್ಕೆ ,ಕಛೇರಿ ಸಿಬ್ಬಂದಿಗಳಾದ ರಜನಿ ದೇವಾಡಿಗ, ನೇತ್ರಾವತಿ ಬೈಂದೂರ್,ಉದಯ ತಲ್ವಾರ್,ಪ್ರಸನ್ನಕುಮಾರ್,ಸುನೀಲ್ ಕೊಚರಿಕರ,ಲತಾ ನಾಯ್ಕ,ಗ್ರಾಮಲೆಕ್ಕಾಧಿಕಾರಿಗಳಾದ ಕೆ.ಶಂಭು,
ಜಾನ್ ಭಾಷಾ,ಗ್ರಾಮಸಾಯಕರಾದ ಶಾಂತ,ಮಧು ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: