May 19, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಗುಂಡಿಬೈಲ್ – ಜನಕಡ್ಕಲ್ ರಸ್ತೆ-ಅಧಿಕಾರಿಗಳೊಂದಿಗೆ ಶಾಸಕ ಸುನೀಲ ನಾಯ್ಕ ಭೇಟಿ.

ಹೊನ್ನಾವರ ತಾಲೂಕಿನ ಗುಂಡಿಬೈಲ್ – ಜನಕಡ್ಕಲ್ ರಸ್ತೆಯು ಆ ಬಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ರಸ್ತೆಯ ಬಗ್ಗೆ ಅತಿ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿತ್ತಾದರು ರಸ್ತೆ ಕಾಮಗಾರಿಯ ಬಗ್ಗೆ ಕೆಲವರಿಂದ ಅಪಸ್ವರ ಕೇಳಿ ಬಂದ ಕಾರಣ ಸ್ಥಳಕ್ಕೆ ಸಂಬoಧಿಸಿದ ಅಧಿಕಾರಿಗಳೊಂದಿಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಇಂದು ಪರಿಶೀಲಿಸಿದರು.

ಈ ರಸ್ತೆ ಆಯ್ದ ಭಾಗಗಳಲ್ಲಿ ಕಾಂಕ್ರಿಟೀಕರಣ ಮತ್ತು ಆಯ್ದ ಭಾಗಗಳಲ್ಲಿ ಮರುಡಾಂಬರೀಕರಣ ಹಾಗೂ ಹೊಸದಾಗಿ ಡಾಂಬರೀಕರಣ ಮಾಡುವಂತೆ ಅಂದಾಜು ಪತ್ರಿಕೆಯಲ್ಲಿರುತ್ತದೆ. ಕಾಮಗಾರಿಯು ೨ ಕೋಟಿ ರೂಪಾಯಿ ವೆಚ್ಚದಲ್ಲಿ ಅಂದಾಜು ಪತ್ರಿಕೆಯ ಪ್ರಕಾರವಾಗಿಯೆ ನಡೆಯುತ್ತಿದ್ದು, ರಸ್ತೆ ನಿರ್ಮಾಣದಲ್ಲಿ ಯಾವುದೇ ವ್ಯತ್ಯಾಸವಾಗದ ಹಾಗೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.

ರಸ್ತೆ ಕಾಮಗಾರಿಯಲ್ಲಿ ಏನಾದರು ವ್ಯತ್ಯಾಸ ಕಂಡುಬoದಲ್ಲಿ ಅಂದಾಜು ಪತ್ರಿಕೆಯನ್ನು ಪಡೆದು ಅದರಂತೆ ಕಾಮಗಾರಿಯನ್ನು ನೆರವೆರಿಸಿಕೊಳ್ಳುವ ಸಂಪೂರ್ಣ ಅಧಿಕಾರ ಸ್ಥಳೀಯರಿಗೆ ಇರುತ್ತದೆ. ನಿಮ್ಮ ರಸ್ತೆ ನಿಮ್ಮ ಹಕ್ಕಾಗಿದೆ. ಏನಾದರು ವ್ಯತ್ಯಾಸ ಕಂಡುಬAದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಶಾಸಕ ಸುನೀಲ ನಯ್ಕ ತಿಳಿಸಿದ್ದಾರೆ.

error: