December 22, 2024

Bhavana Tv

Its Your Channel

ಮುಂಜಾಗ್ರತಾ ಕ್ರಮವಾಗಿ ಹೊನ್ನಾವರದಾದ್ಯಂತ ಹೆಚ್ಚಿನ ನಿಗಾವಹಿಸಬೇಕು – ಬಿಜೆಪಿ ತಾಲೂಕಾ ಘಟಕ ಆಗ್ರಹಿಸಿದೆ.

ಹೊನ್ನಾವರ ತಹಶಿಲ್ದಾರ ಕಚೇರಿಯಲ್ಲಿ ತಹಶಿಲ್ದಾರ ವಿವೇಕ್ ಶೇಣ್ವಿ ಅವರೊಂದಿಗೆ ಕೆಲಕಾಲ ಚರ್ಚಿಸಿದ ಬಿಜೆಪಿ ಮುಖಂಡರು, ಭಟ್ಕಳದಲ್ಲಿನ ಕೊರೊನಾ ಪ್ರಕರಣ ದಿನೇ ದಿನೇ ಗಂಭಿರತೆಯಲ್ಲಿರುವುದರಿಂದ ಹೊನ್ನಾವರ ತಾಲೂಕಿನಲ್ಲಿ ಲಾಕ್ ಡೌನ್ ಸಡಿಲಿಕೆಯ ಬಗ್ಗೆ ವಿಷಯ ಪ್ರಸ್ತಾಪಿಸಿ ಈ ಮೊದಲಿನಂತೆಯೇ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ ಹೆಚ್ಚಿಸಬೇಕೆಂದರು. ಶಿರಾಲಿ ಚೆಕ್ ಪೋಸ್ಟ್ಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸದೇ ಎಲ್ಲಾ ವಾಹನಗಳು ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿ ಭಟ್ಕಳದಿಂದ ಹೊನ್ನಾವರಕ್ಕೆ ಆಗಮಿಸುವ ಇಲ್ಲಿಂದ ಭಟ್ಕಳಕ್ಕೆ ತೆರಳುವ ವಾಹನಗಳ ಮಾಹಿತಿ ಪಡೆಯಬೇಕು. ಅನಾವಶ್ಯಕ ಸಂಚರಿಸುವವರಿಗೆ ಕಡಿವಾಣ ಬೀಳಬೇಕೆಂದರು. ಕೆಲವೆಡೆ ಚೆಕ್ ಪೋಸ್ಟ್ ತಲುಪದೇ ಒಳ ಮಾರ್ಗಗಳಿಂದ ವಾಹನಗಳು ಬರುತ್ತಿದ್ದು ಈ ಬಗ್ಗೆಯೂ ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿಗಾವಹಿಸಬೇಕೆಂದರು. ತಹಶಿಲ್ದಾರ ವಿವೇಕ್ ಶೇಣ್ವಿ ಮಾತನಾಡಿ ಇಗಾಗಲೇ ಚೆಕ್ ಪೋಸ್ಟ್ ಗಳಲ್ಲಿನ ಸಮಸ್ಯೆಗಳ ಕುರಿತು ಎಸಿಯವರ ಗಮನಕ್ಕೆ ತರಲಾಗಿದೆ. ತಾಲೂಕಿಗೆ ಕೊರೊನಾ ಪ್ರಕರಣ ಬರದಂತೆ ಆದಷ್ಟು ರೀತಿಯಲ್ಲಿ ಮುಂಜಾಗ್ರತಾ ಕ್ರಮ ನಡೆಯುತ್ತಲಿದೆ. ಭಟ್ಕಳದ ಕೊರೊನಾ ಪ್ರಕರಣ ಹೆಚ್ಚುತ್ತಲಿರುವದರಿಂದ ಹೊನ್ನಾವರಕ್ಕೆ ಲಾಕ್ ಡೌನ್ ಸಡಿಲಿಕೆಯ ವಿನಾಯಿತಿ ರದ್ದುಗೊಳಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ನಂತರ ಬಿಜೆಪಿ ತಾಲೂಕಾಧ್ಯಕ್ಷ ರಾಜುಭಂಡಾರಿ ಮಾದ್ಯಮದೊಂದಿಗೆ ಮಾತನಾಡಿ ಭಟ್ಕಳದಲ್ಲಿನ ಕೊರೊನಾ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ತಾಲೂಕಿನ ಗಡಿ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸುವುದು ಅಗತ್ಯವಾಗಿದೆ. ಆರೋಗ್ಯ ಸಂಭಂದಿ ಸಂಚರಿಸುವವರ ಹೊರತುಪಡಿಸಿ ಅನಾವಶ್ಯಕ ಸಂಚರಿಸುವವರ ಮೇಲೆ ಕ್ರಮ ಜರುಗಿಸಬೇಕು. ಪಟ್ಟಣದ ಸೂಕ್ಷ್ಮ ಪ್ರದೇಶದಲ್ಲಿಯು ಹೆಚ್ಚಿನ ನಿಗಾವಹಿಸಬೇಕು‌‌ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯ ವಿಜುಕಾಮತ್, ಬಿಜೆಪಿ ಮುಖಂಡರಾದ ಎಮ್ ಎಸ್ ಹೆಗಡೆ ಕಣ್ಣಿ,ಪರಮೇಶ್ವರ ನಾಯ್ಕ, ರವಿ ನಾಯ್ಕ ರಾಯಲಕೇರಿ,ಉಲ್ಲಾಸ ನಾಯ್ಕ,ರಾಘವ ನಾಯ್ಕ ಜಲವಳ್ಳಿ,ಲಂಭೋದರ ನಾಯ್ಕ ಮತ್ತಿತರಿದ್ದರು.

error: