June 20, 2024

Bhavana Tv

Its Your Channel

ಹೊನ್ನಾವರ ಪತ್ರಿಕಾ ವಿತರಕರು ಹಾಗೂ ಏಜೆಂಟರುಗಳಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಂದ ಅಗತ್ಯ ದಿನಸಿ ಕಿಟ್‍ಗಳ ವಿತರಣೆ

ಹೊನ್ನಾವರ: ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ವಿತರಕರು ಹಾಗೂ ಏಜೆಂಟರುಗಳಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಅಗತ್ಯ ದಿನಸಿ ಕಿಟ್‍ಗಳನ್ನು ಹೊನ್ನಾವರ ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಅವರ ಮೂಲಕ ಶನಿವಾರ ವಿತರಿಸಿದರು.
ದಿನಸಿ ಕಿಟ್‍ಗಳನ್ನು ವಿತರಿಸಿ ಹೊನ್ನಾವರ ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಮಾತನಾಡಿ ಪತ್ರಿಕಾ ವಿತರಕರು ಎಲ್ಲಾ ವ್ಯಾಪ್ತಿಗಳಿಗೂ ಹೋಗಿ ಪತ್ರಿಕೆಗಳನ್ನು ವಿತರಿಸುತ್ತಿದ್ದಾರೆ. ಕರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ, ಪೊಲೀಸ್ ಮತ್ತಿತರ ಕ್ಷೇತ್ರಗಳ ಸಿಬ್ಬಂದಿಯಂತೆ ಪತ್ರಿಕಾ ವಿತರಕರೂ ದುಡಿಯುತ್ತಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿಯೂ ಓದುಗರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಪತ್ರಿಕೆಗಳು ಯಶಸ್ಸು ಗಳಿಸಲು ಸಾಧ್ಯವಾಗಿದ್ದು, ಇದಕ್ಕೆ ಪತ್ರಿಕಾ ವಿತರಕರು ಮುಖ್ಯ ಕಾರಣರಾಗಿದ್ದಾರೆ. ವಿತರಕರಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಅಗತ್ಯ ವಸ್ತುಗಳನ್ನು ನೀಡಿ ಮಾನಸಿಕ ಸ್ಥೈರ್ಯ ತುಂಬುತ್ತಿದ್ದು, ಕರೊನಾ ಸಂಕಷ್ಟದಲ್ಲಿ ಮನೆ-ಮನ ತಲುಪಿದ್ದಾರೆ. ಇದು ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಅವರನ್ನು ಅಭಿನಂದಿಸಿದರು.
ಪತ್ರಿಕಾ ವಿತರಕ ಪ್ರಶಾಂತ ಶೇಟ್, ನಾಗೇಂದ್ರ ಶೇಟ್ ಮಾತನಾಡಿ ಕಷ್ಟದ ಕಾಲದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಬಡ ಜನರ ಹಸಿವು ನೀಗಿಸಿ, ಧೈರ್ಯ ತುಂಬಿದ್ದಾರೆ. ಇವರ ಈ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಈ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅಜೀತ್ ತಾಂಡೇಲ್, ಸುಭಾಷ್ ಮೇಸ್ತ, ವಿನಾಯಕ್ ಶೇಟ್ ಉಪಸ್ಥಿತರಿದ್ದರು. ಪತ್ರಿಕಾ ವಿತರಕರಾದ ಸುಬ್ರಾಯ ನಾಯ್ಕ, ನಾಗರಾಜ ಶೇಟ್, ಆದರ್ಶ, ಸದಾನಂದ ಶೇಟ್, ರಾಜು ಭಂಡಾರಿ, ನಾಗರಾಜ ಕಡೆಕರ್, ದೀಪಕ ನಾಯ್ಕ, ವಿನಾಯಕ ಮೇಸ್ತ, ಕಿರಣ ಶೇಟ್, ಗೋಪಾಲ ಶೆಟ್ಟಿ, ಪ್ರಕಾಶ ಮೇಸ್ತ, ಗಿರೀಶ ಮೇಸ್ತ, ಹಮೂ ಸಾಬ್, ಲೊಕೇಶ ಸಾರಂಗ್ ದಿನಸಿ ಕಿಟ್‍ಗಳನ್ನು ಪಡೆದು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಧನ್ಯವಾದ ಸಮರ್ಪಿಸಿದರು.

error: