March 21, 2023

Bhavana Tv

Its Your Channel

ಭಟ್ಕಳದಲ್ಲಿ ಮತ್ತೆ ಏಳು ಕೊರೋನ ಪಾಸಿಟಿವ್?

ಭಟ್ಕಳ: ಭಟ್ಕಳ ಪಟ್ಟಣದಲ್ಲಿ ಇಂದು ಮತ್ತೆ ಏಳು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ, ಇದಕ್ಕೆಲ್ಲ ಉತ್ತರ ಮಧ್ಯಾಹ್ನ ೧೨ ಗಂಟೆಗೆ ಬರಲಿರುವ ಹೆಲ್ತ್ ಬುಲೆಟಿನ್ ನಲ್ಲಿ ಖಚಿತವಾಗಲಿದೆ.

ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿರುವ ಶಂಕೆ ಇದ್ದು, ಈ ಪೈಕಿ ಓರ್ವ ರಿಕ್ಷಾ ಚಾಲಕ ಕೂಡ ಇದ್ದಾನೆ ಎನ್ನಲಾಗಿದೆ, ಇವರೆಲ್ಲ ಸೋಂಕಿತರ ಕುಟಂಬಸ್ಥರು ಹಾಗೂ ಸಂಭoದಿಗಳೇ ಆಗಿದ್ದಾರೆ ಎನ್ನಲಾಗಿದೆ.
ಈಗಾಗಲೇ ಉತ್ತರ ಕನ್ನಡದಲ್ಲಿ ೨೧ ಜನ ಸೋಂಕಿತರಿದ್ದು ಅವರೇಲ್ಲರೂ ಭಟ್ಕಳಿಗರೆ ಆಗಿದ್ದಾರೆ, ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ಕೋವಿಡ್- ೧೯ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧ್ಯಾಹ್ನ ಹೆಲ್ತ್ ಬುಲೆಟಿನ್ ನಲ್ಲಿ ದೃಢಪಟ್ಟಿದ್ದೇ ಆದರೆ ಉತ್ತರ ಕನ್ನಡ ಸೋಂಕಿತರ ಸಂಖ್ಯೆ ೨೮ಕ್ಕೆ ಏರಲಿದೆ. ಒಟ್ಟು ಸೋಂಕಿತರ ಸಂಖ್ಯೆ ೩೯ ಆಗಲಿದೆ.

About Post Author

error: