October 5, 2024

Bhavana Tv

Its Your Channel

ಭಟ್ಕಳದಲ್ಲಿ ಏರುತ್ತಲಿದೆ ಕೊರೋನಾ ಸೋಂಕಿತರ ಸಂಖ್ಯೆ ಇOದು ೭ ದೃಡ, ಒಟ್ಟು ೨೧

ಭಟ್ಕಳ: ಪಟ್ಟಣದಲ್ಲಿ ಇಂದು ಮತ್ತೆ ಏಳು ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೆಟಿನ್ ತಿಳಿಸಿದೆ.

ಈಗಾಗಲೇ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಮೂವರು ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ನಾಲ್ವರು ಸೇರಿದಂತೆ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೫೦ ವರ್ಷದ ವೃದ್ಧೆ, ೧೫, ೧೬ ವರ್ಷದ ಯುವಕರು, ೪೨ ವರ್ಷದ ಪುರುಷ, ೨೧ ವರ್ಷದ ಯುವತಿ, ೩೧ ವರ್ಷದ ಮಹಿಳೆ ಹಾಗೂ ೬೦ ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ ಒಬ್ಬರು ಆಟೋ ಡ್ರೆöÊವರ್ ಸೇರಿದ್ದಾರೆಂದು ಸುದ್ದಿ ವೈರಲ್ ಆಗುತ್ತಿದೆ.ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ಕೋವಿಡ್- ೧೯ ವಿಶೇಷ ವಾರ್ಡ್ ಈಗಾಗಲೇ ೨೧ ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಸಂಖ್ಯೆ ೨೮ಕ್ಕೆ ಏರಿದ್ದು, ಒಟ್ಟು ಸೋಂಕಿತರ ಸಂಖ್ಯೆ ೩೯ ಆಗಿದೆ. ಈ ಪೈಕಿ ೧೧ ಮಂದಿ ಈಗಾಗಲೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

error: