December 22, 2024

Bhavana Tv

Its Your Channel

ಕೋರೋನಾ ಸೋಂಕಿತ ಭಟ್ಕಳ ಆಟೋ ಚಾಲಕನಿಗೆ ಸೂಕ್ತ ಚಿಕಿತ್ಸೆ ನೀಡಿ- ಕ್ರಷ್ಟ ನಾಯ್ಕ ಆಸರಕೇರಿ ಮನವಿ’

ಭಟ್ಕಳ: ಕೋರೋನಾ ಹಿನ್ನೆಲೆ ಜನರ ಸೇವೆಗಾಗಿ ತಾಲ್ಲೂಕಾಡಳಿತದಿಂದ ಪಾಸ್ ಪಡೆದು ಉಚಿತ ಸೇವೆ ನೀಡಿದ ಹಿನ್ನೆಲೆಯಲ್ಲಿ ಆಟೋ ಚಾಲಕನೋರ್ವ ಕೋರೋನಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಕೋರೊನಾ ಸೊಂಕಿತನಾಗಿದ್ದರಿAದ ಚಾಲಕನಿಗೆ ಸರಿಯಾದ ಚಿಕಿತ್ಸೆ ನೀಡಬೇಕೆಂದು ಭಟ್ಕಳ ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಮಾನವೀಯ ದೃಷ್ಟಿಯಲ್ಲಿ ಜನರಿಗೆ ತುರ್ತು ಆರೋಗ್ಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗಬಾರದೆಂದು ಪಟ್ಟಣದ ಬದ್ರಿಯಾ ಕಾಲೋನಿಯ ಆಟೋರಿಕ್ಷಾ ಚಾಲಕ ಪಾಸ್ ಪಡೆದು ಉಚಿತ ಸೇವೆ ನೀಡಲು ಮುಂದೆ ಬಂದಿದ್ದಾನೆ. ಈ ಮಧ್ಯೆ ಯಾರೋ ಓರ್ವ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಬಿಡಲಾಗಿದ್ದು, ಆತನಿಗೆ ಇದ್ಯಾವುದರ ಅರಿವಿಲ್ಲವಾಗಿದೆ. ಈಗ ಈತನಿಗೆ ಕೋರೋನಾ ರೋಗ ದೃಡಪಟ್ಟಿದ್ದು ಆತನಿಗೆ ಸರಿಯಾದ ಚಿಕಿತ್ಸೆ ನೀಡಬೇಕೆಂದು ಹಾಗೂ ಇತನು ಬಡವನಾಗಿದ್ದು ಯಾವುದೇ ನಿಷ್ಕಾಳಜಿ ಮಾಡದೇ ಸೂಕ್ತ ಚಿಕಿತ್ಸೆ ನೀಡಿ ಗುಣಮುಖನಾಗಿ ಬರುವಂತೆ ಮಾಡಬೇಕು ಎಂದು ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

error: