September 18, 2024

Bhavana Tv

Its Your Channel

ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಸುತ್ತ ಮುತ್ತಲಿನ ಮುಂಭಾಗದ ರಾಜಕಾಲುವೆ ದುರ್ವಾಸನೆ ಬೀರುತ್ತಿದ್ದರೂ ಸಂಭದಿಸಿದ ಅಧಿಕಾರಿಗಳಿಂದ ನಿಲಕ್ಷ.

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕು ಬೀಚಗಾನಹಳ್ಳಿ ಪಂಚಾಯಿತಿ ಕೇಂದ್ರದ ಸುತ್ತಮುತ್ತಲಿನ ರಾಜಕಾಲುವೆಗಳು ಕೊಳಚೆ ನೀರಿನಿಂದ ತುಂಬಿ ದುರ್ವಾಸನೆ ಬೀರುತ್ತಿದೆ. ಸ್ಥಳೀಯ ಮಹಿಳೆಯರಿಗೆ ಸ್ವಚ್ಛತೆ ಬಗ್ಗೆ ಕೇಳಿದರೆ ಸುಮಾರು ತಿಂಗಳುಗಳೇ ಹಾಗೆಯೇ ಇದೆ ಎಂದು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟಿವಿಗಳಲ್ಲಿ ಕೊರೋನಾ ಮಹಾಮಾರಿ ಬಗ್ಗೆ ಭೀತಿಯಿಂದ ತತ್ತರಿಸುತ್ತಿರುವ ಸ್ಥಳೀಯರು ಈ ಸ್ವಚ್ಛತೆಯ ಬಗ್ಗೆ ಕಣ್ಣು ಮುಚ್ಚಿಕೊಂಡಿರುವ ಅಭಿವೃದ್ಧಿ ಅಧಿಕಾರಿಗಳು ಬಹುದಿನಗಳಿಂದ ಅಧಿಕಾರಿಗಳಿಗೆ ಹೇಳಿದರೂ ಸ್ವಚ್ಛತೆಯ ಬಗ್ಗೆ ತಲೆಕೆಡಿಸಿಕೊಳ್ಳದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿಲಕ್ಷ ವ್ಯಕ್ತಪಡಿಸುತ್ತಿದ್ದಾರೆ.
ಈ ಭಾಗದ ಸುತ್ತಮುತ್ತ ಎಲ್ಲಿ ನೋಡಿದರೂ ರಾಜಕಾಲುವೆಗಳಲ್ಲಿ ಮನೆಯ ಸುತ್ತಮುತ್ತಲಿನ ಕಾಲುವೆಗಳಲ್ಲಿ ಕೊಳಚೆ ನೀರು ತುಂಬಿದೆ ಹಾಗು ಪ್ಲಾಸ್ಟಿಕ್ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಆದರೆ ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಯೋಜನೆ ಅಡಿಯಲ್ಲಿ ಎಲ್ಲೆಲ್ಲೂ ಕಾಮಗಾರಿಗಳನ್ನು ಮತ್ತು ಸ್ವಚ್ಛತೆಯನ್ನು ಮಾಡಿಸುತ್ತಾರೆ ಇತ್ತ ಗ್ರಾಮೀಣ ಪ್ರದೇಶದಲ್ಲಿ ಮನೆ ಬಾಗಿಲು ಮುಂಭಾಗದಲ್ಲಿ ಹಾಗು ಅಂಗನವಾಡಿ ಮುಂಭಾಗದಲ್ಲಿ ಕೊಳಚೆ ನೀರು ಬಿದ್ದಿದೆ ಇಂತಹ ಭಾಗದಲ್ಲಿ ಸ್ವಚ್ಚತಾ ಕಾರ್ಯ ಮಾಡಿಸಬೇಕಿದೆ ಎನ್ನುವುದು ಈ ಭಾಗದ ಹೆಚ್ಚಿನ ಸಾರ್ವಜನಿಕರ ಅಭಿಪ್ರಾಯವಾಗಿದೆ. ಅಲ್ಲದೇ ಈ ಭಾಗದ ಹಲವಡೆ ಕಸದ ರಾಶಿಗಳು ಬಿದ್ದರೂ ತೆರವು ಮಾಡುವತ್ತ ಪಂಚಾಯತಿ ಅಧಿಕಾರಿಗಳು ಗಮನಹರಿಸದೆ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

error: