
ಮಂಡ್ಯ: ಪಾಂಡವಪುರ ತಾಲ್ಲೂಕಿನ ರೈಲ್ವೆ ನಿಲ್ದಾಣ, ಕೆನ್ನಾಳು ಜಯಂತಿನಗರ ಹರಳಹಳ್ಳಿ,ಎಲೆಕೆರೆ ಡಾಮಡಹಳ್ಳಿ ಮತ್ತು ಪಾಂಡವಪುರ ಪಟ್ಟಣದಲ್ಲಿ ಯಾವುದೇ ಮತಭೇದವಿಲ್ಲದೆ ಎಲ್ಲ ವರ್ಗದ ಬಡಜನರಿಗೆ ರೋಷನ್ ಅಲಿ ತಂಡದವರು ಕಿಟ್ ವಿತರಿಸಿದರು.. ರೋಷನ್ ಅಲಿ ತಂಡದ ಸದಸ್ಯ ನಜೀರ್ ಅಹಮದ್ ಮಾತನಾಡಿ,ಲಾಕ್‌ಡೌನ್‌ನಿಂದ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ಕೃಷಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ.ಸರ್ಕಾರ ಬಡವರಿಗೆ ಅಕ್ಕಿ ಕೊಡುತ್ತಿದ್ದು, ಇನ್ನಿತರ ವಸ್ತುಗಳನ್ನು ಖರೀದಿಸಿಲು ಹಣವಿಲ್ಲದೆ ಜನರು ಕಂಗಾಲಾಗಿದ್ದಾರೆ. ಈ ವಿಚಾರವನ್ನು ನಾವು ಎಐಸಿಸಿ ಸದಸ್ಯ ರೋಷನ್ ಅಲಿ ಅವರ ಗಮನಕ್ಕೆ ತಂದಾಗ ಕೂಡಲೇ ಅವರು ನಮ್ಮ ಮನವಿಗೆ ಸ್ಪಂದಿಸಿ ಬೆಂಗಳೂರಿನಿAದ ನೂರಾರು ಬಡಜನರಿಗೆ ಆಹಾರ ಧಾನ್ಯಗಳ ಕಿಟ್ ಕಳಿಸಿದ್ದಾರೆ. ಇಂತಹ ಕಷ್ಟದ ಸಂದರ್ಭದಲ್ಲಿ ತಾಲ್ಲೂಕಿನ ಜನಪ್ರತಿನಿಧಿಗಳು ಯಾವುದೇ ರೀತಿಯ ಉದಾಸೀನ ತೋರದೆ ಜನರ ಸಹಾಯಕ್ಕೆ ಮುಂದಾಗಬೇಕು ಎಂದರು…
ಈ ಸಂದರ್ಭದಲ್ಲಿ ಕೆನ್ನಾಳು ಗ್ರಾಮದ ಜೆಡಿಎಸ್ ಮುಖಂಡರಾದ ಲೊಕೇಶ್, ವಿ.ಎಸ್.ಎಸ್.ಎನ್ ನಿರ್ದೇಶಕರಾದ ದೇವಾನಂದ
ಕೆ.ಸಿ.ಲಕ್ಷ್ಮಣ, ಸ್ವಾಭಿಮಾನಿ ಮಹಿಳೆಯರ ಸಹಕಾರ ಸಂಘದ ಅಧ್ಯಕ್ಷೆ ಎಚ್.ಎಂ.ಪ್ರಭಾವತಿ, ಗ್ರಾಪಂ ಸದಸ್ಯರಾದ ಶಂಕರೇಗೌಡ
ಪುಷ್ಪಾ, ಮುಖಂಡರಾದ ಎಲೆಕೆರೆ ಸಮಿಯುಲ್ಲಾ, ಹರೀಶ್ ಕೆನ್ನಾಳು ಮಂಜುನಾಥ್ ಮುಂತಾದವರು ಇದ್ದರು…
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.