ಹೊನ್ನಾವರ: ಹೊನ್ನಾವರ ತಾಲೂಕಿನ ಮೇಲಿನ ಮೂಡ್ಕಣಿ ಗ್ರಾಮದ ನಿವಾಸಿಯಾದ ಗಣಪತಿ ನಾಗು ನಾಯ್ಕ ಇತನಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಲಾಗಿ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇಟ್ಟಿದ್ದನ್ನು ಪತ್ತೆ ಹಚ್ಚಿ ೧೦೦ ಮೀಲಿಯ ೫೦ ಕಳ್ಳಭಟ್ಟಿ ಸರಾಯಿಯ ಸ್ಯಾಚೇಟ್ಸ್ಗಳು, ೨ ಲೀ. ಸಾಮರ್ಥ್ಯದ ಒಂದು ಪ್ಲಾಸ್ಟೀಕ್ ಬಾಟಲಿಯಲ್ಲಿ ಸುಮಾರು ೧.೫ ಲೀ.ದಷ್ಟು ಕಳ್ಳಭಟ್ಟಿ ಮಧ್ಯ ಪತ್ತೆ ಹಚ್ಚಿ, ಗಣಪತಿ ನಾಗು ನಾಯ್ಕ ಮೇಲೆ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಒಟ್ಟೂ ೬.೫೦೦ ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ಜಪ್ತುಪಡಿಸಿಕೊಂಡು ಒಟ್ಟೂ ಮೌಲ್ಯ ರೂ ೧,೩೦೦ ಎಂದು ಅಂದಾಜಿಸಲಾಗಿದೆ ಈ ಸಂದರ್ಭದಲ್ಲಿ ಆರೋಪಿತನು ಓಡಿ ಪರಾರಿಯಾಗಿರುತ್ತಾನೆ. ತಾಲೂಕಿನ ಇನ್ನೊಂದಡೆ ಮಂಕಿ ಗ್ರಾಮದ ಬಂಡಿಬೈಲ್ ವ್ಯಾಪ್ತಿಯ ಅರಣ್ಯ ಪ್ರದೇಶದ ಗೇರು ಪ್ಲಾಂಟೇಶನ್ನಲ್ಲಿ ಒಟ್ಟೂ ೪೦ ಲೀಟರ್ ಬೆಲ್ಲದ ಕೊಳೆಯನ್ನು ಜಪ್ತುಪಡಿಸಿ ಕಳ್ಳಭಟ್ಟಿ ತಯಾರಿಕೆಗೆ ಉಪಯೋಗಿಸಿದ ಅಲ್ಯೂಮೀನಿಯಂ ಹಂಡೆ, ಅಲ್ಯೂಮೀನಿಯಂ ಪಾತ್ರೆ ಹಾಗೂ ೫ ಪೂಟ್ ಉದ್ದದ ೦೩ ಪ್ಲಾಸ್ಟಿಕ್ ಪೈಪ್ಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಪ ವಿಭಾಗ ಹೊನ್ನಾವರ ಅಬಕಾರಿ ಉಪ ಅಧೀಕ್ಷಕರಾದ ಸಂತೋಷ ಕುಡಾಳಕರ್, ರವರ ನೇತೃತ್ವದಲ್ಲಿ, ಅಬಕಾರಿ ನಿರೀಕ್ಷಕರಾದ ದಾಮೋದರ್ ಎನ್ ನಾಯ್ಕ, ಅಬಕಾರಿ ಉಪ-ನಿರೀಕ್ಷಕರಾದ ಪುಷ್ಪಾ ಗದಾಡಿ, ಗಂಗಾಧರ್ ಯು ಅಂತರಗಟ್ಟಿ, ಅಬಕಾರಿ ರಕ್ಷಕರುಗಳಾದ ಹಾಲಸಿದ್ದಪ್ಪ ಕುರಿಹುಲಿ, ಮುತ್ತೇಪ್ಪ ಬುಗಡಿಕಟ್ಟಿ, ವಿಕ್ರಮ್ ಬೀಡಿಕರ್, ರಮೇಶ್ ರಾಠೋಡ್ ಹಾಗೂ ವಾಹನ ಚಾಲಕರಾದ ಎಚ್ ಎಚ್ ಸೈಯದ್ ಹಾಗೂ ಸಿದ್ರಾಮಪ್ಪ ಹೊಳೆಪ್ಪಗೋಳ ಹಾಜರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.