May 29, 2023

Bhavana Tv

Its Your Channel

ಭಾರತಿ ಮಹಿಳಾ ವಿವಿದೊದ್ದೇಶ ಸಂಘದ ವತಿಯಿಂದ ಶೇರುದಾರ ಮಹಿಳೆಯರಿಗೆ ಕಿಟ್ ವಿತರಣೆ.

ಹೊನ್ನಾವರ; ಮಹಿಳೆಯರ ಸಂಕಷ್ಟಕ್ಕೆ ನೆರವಾಗಲು ೧೯೪೪ರಿಂದ ಕಾರ್ಯನಿರ್ವಹಿಸುತ್ತಿರುವ ಭಾರತಿ ಮಹಿಳಾ ವಿವಿದದ್ದೇಶ ಸಂಘವು ಈ ಹಿಂದಿನಿoದಲೂ ಅನೇಕ ಮಹಿಳಾ ಕುಟುಂಬಕ್ಕೆ ನೆರವಾಗಿದೆ. ಕರೋನಾ ಸಮಯದಲ್ಲಿ ಈ ರೋಗದ ನಿಯಂತ್ರಣಕ್ಕಾಗಿ ದೇಶದ್ಯಂತ ಲಾಕ್ ಡೌನ್ ಸಮಯದಲ್ಲಿ ಸಂಘದ ಷೇರುದಾರ ಬಡ ಮಹಿಳೆಯರಿಗೆ ನೆರವಾಗುವ ದೃಷ್ಠಿಯಿಂದ ಆಹಾರ ಧಾನ್ಯದ ದಿನಸಿ ಕಿಟ್ ಹಾಗೂ ಮಾಸ್ಕ ವಿತರಣೆಯನ್ನು ಸಂಘದ ಪ್ರಧಾನ ಕಛೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಶಾರದಾ ಮೇಸ್ತ , ಹಿರಿಯ ಪತ್ರಕರ್ತರಾದ ಜಿ.ಯು.ಭಟ್, ಉಪಾಧ್ಯಕ್ಷರಾದ ಭವಾನಿ ನಾಯ್ಕ, ನಿರ್ದೇಶಕರಾದ ವನಿತಾ ಶ್ಯಾನಭಾಗ, ಮಾಲಿನಿ ನಾಯ್ಕ, ಅನುಸುಯಾ ಶ್ಯಾನಭಾಗ, ವಿಜಯಾ ಪೈ, ತುಳಸಿ ಗೌಡ, ವಿಜಯಾ ಜೈನ್, ನಿಧಿ, ಮಾಧುರಿ ನಾಯ್ಕ, ವಿದ್ಯಾ ದೇವಳಿ, ಸವಿತಾ ಪಾವಸ್ಕರ್ ಹಾಜರಿದ್ದರು.

About Post Author

error: