December 19, 2024

Bhavana Tv

Its Your Channel

ಜಿಲ್ಲೆಯಲ್ಲಿ ಕರೊನಾ ಪ್ರಕರಣ ಕುಮುಟಾದಲ್ಲಿ ಮಾಧ್ಯಮಗೊಷ್ಟಿ ಮೂಲಕ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು

ಕುಮಟಾ;ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಭಟ್ಕಳದ ಎರಡು ವರ್ಷದ ಹೆಣ್ಣು ಮಗು(ಪಿ೯೨೯) ಹಾಗೂ ರತ್ನಾಗಿರಿಯಿಂದ ಮೀನು ಸಾಗಾಟದ ಲಾರಿಯಲ್ಲಿ ಮೇ ೫ ರಂದು ಬಂದಿದ್ದ ೨೬ ವರ್ಷದ ವ್ಯಕ್ತಿ(ಪಿ೯೪೬) ಕರೊನಾ ಸೋಂಕಿತರು ಎಂದುಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದ್ದಾರೆ.
ಕುಮಟಾದಲ್ಲಿ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪಿ೯೨೯ ಇವರು ನಿರೀಕ್ಷೆಯಂತೆ ತನ್ನ ತಾಯಿ ಪಿ೭೮೬ ಸಂಪರ್ಕದಿ0ದ ಸೋಂಕು ಪಡೆದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಗೆಯೇ ಪಿ೯೪೬ ಇವರನ್ನು ಹಿರೇಗುತ್ತಿ ಚೆಕ್ಪಸ್ಟ ನಲ್ಲಿ ತಪಾಸಣೆ ವೇಳೆ ಹಿಡಿದು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಇವರು ಕುಮಟಾ ತಾಲೂಕಿನ ವ್ಯಕ್ತಿಯಾಗಿದ್ದು ರತ್ನಾಗಿರಿಗೆ ೩೦ ಜನರೊಂದಿಗೆ ಮೀನುಗಾರಿಕೆ ಮಾಡುತ್ತಿದ್ದರು.ಇವರಿಗೆ ಯಾವುದೇ ರೋಗ ಲಕ್ಷಣ ಇರಲಿಲ್ಲ. ಲಾರಿ ಚಾಲಕ ಕೂಡಾ ಯಾರ ಸಂಪರ್ಕಕ್ಕೂ ಬಂದಿಲ್ಲ. ಇವರು ಜಿಲ್ಲೆಯಲ್ಲಿ ಯಾರನ್ನೂ ಸಂಪರ್ಕ ಮಾಡಿಲ್ಲ. ಸೋಂಕಿತ ಉಳಿದಿದ್ದ ಬ್ಲಾಕ್?ನಲ್ಲಿದ್ದ ಇತರರನ್ನು ಪುನಃ ತಪಾಸಣೆಗೊಳಪಡಿಸಲಾಗವುದು. ಬ್ಲಾಕ್?ನ್ನು ತೆರವುಗೊಳಿಸಿ ಶುದ್ಧೀಕರಿಸಲಾಗುವುದು ಮತ್ತು ಕಂಟೈನ್ಮೆ0ಟ್ ಝೋನ್ ಎಂದು ಘೋಷಿಸಿ ತಹಸೀಲ್ದಾರ್ ಸುಪರ್ದಿಗೆ ನೀಡಲಾಗುವುದು. ಸಾಕಷ್ಟು ಸುರಕ್ಷತಾ ಮುಂಜಾಗ್ರತೆ ಇರುವದರಿಂದ ಕುಮಟಾದ ಜನ ಅನಗತ್ಯ ಆತಂಕಿತರಾಗಬೇಕಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದರು.
ನಮ್ಮ ಸಾಂಸ್ಥಿಕ ಕ್ವಾರಂಟೈನ್ ಬಗ್ಗೆ ಕೆಲವರಿಗೆ ಅಸಮಾಧಾನವಿದೆ. ಬೇರೆ ರಾಜ್ಯದಿಂದ ಬಂದ ಶಂಕಿತರನ್ನು ಹೋಂ ಕ್ವಾರಂಟೈನ್‌ನಲ್ಲಿಟ್ಟರೆ ಸತ್ಯ ಹೇಳುವುದಿಲ್ಲ. ಊರೆಲ್ಲಾ ಸುತ್ತಬಹುದು. ಸದ್ಯ ಹೊರ ರಾಜ್ಯದಿಂದ ಬಂದವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ರಾಜ್ಯದ ಒಳಗಿನವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಹೊರ ರಾಜ್ಯದಿಂದ ಬರುವವರು ಅನುಮತಿ ಪಡೆದು ನ್ಯಾಯ ಮಾರ್ಗದಲ್ಲಿ ಬರಬೇಕು. ಇಲ್ಲಿ ಬಂದ ಮೇಲೆಯೂ ನಿಯಮಾವಳಿಯಂತೆ ಸ್ವಯಂ ಪ್ರೇರಣೆಯಿಂದ ಸಾಂಸ್ಥಿಕ ಕ್ವಾರಂಟೈನ್‌ಗೆ ಸೇರಿಕೊಳ್ಳಬೇಕು ಎಂದು ವಿನಂತಿಸಿದರು.
ಯಾರಾದರೂ ಹೊರ ರಾಜ್ಯದಿಂದ ಬಂದವರು ಲಾಡ್ಜಗಳಲ್ಲಿ ಇರಬಯಸಿದರೆ ಮಾಲಿಕರು ಅದಕ್ಕೆ ಅವಕಾಶ ಮಾಡಿಕೊಡಬೇಕು. ನಷ್ಟದಲ್ಲಿರುವ ಹೊಟೆಲ್, ಲಾಡ್ಜ ಉದ್ಯಮಕ್ಕೂ ಅನುಕೂಲವಾಗಲಿದೆ. ಹೊರಗಿನಿ.ದ ಬಂದವರೆಲ್ಲರೂ ಸೋಂಕಿತರಲ್ಲ. ನಮ್ಮ ಮೇಲೆ ಮುಂದೆ ೧೫ ದಿನಗಳ ಸವಾಲು ದೊಡ್ಡದು. ಹೊರಗಿನಿಂದ ಬರುವವರು ತೀರಾಅಗತ್ಯ ಇದ್ದರೆ ಮಾತ್ರ ಊರಿಗೆ ಬನ್ನಿ, ಇಲ್ಲದಿದ್ದರೆ ಸ್ವಲ್ಪ ದಿನ ಕಾಯಿರಿ. ಒಂದೊಮ್ಮೆ ನಿಮಗೆ ಸೋಂಕು ಇದ್ದರೆ ಇಲ್ಲಿನ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಭಟ್ಕಳದಲ್ಲಿ ಸೋಂಕು ಹೆಚ್ಚುತ್ತಿರುವುದರಿಂದ ವ್ಯಾಪಕವಾಗಿ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ. ಕೆಲ ಪ್ರದೇಶಗಳನ್ನು ಸೀಲ್ಡೌನ್ ಮಾಡಿದ್ದೇವೆ, ಸೋಂಕಿತರ ಸಂಪರ್ಕ ಬಂದವರ ಗಂಟಲು ದ್ರವ ತಪಾಸಣೆ ಕಳಿಸಿದ್ದೇವೆ. ಇನ್ನಷ್ಟು ತಪಾಸಣೆ ಮಾಡುತ್ತೇವೆ. ಇನ್ನು ಕೆಲವೇ ದಿನದಲ್ಲಿ ಸೋಂಕು ನಿಯಂತ್ರಣ ಸಂಪೂರ್ಣ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಚೆಕ್?ಪೋಸ್ಟಗಳಲ್ಲಿ ತೀವ್ರ ನಿಗಾ ಇರಿಸಿದ್ದರಿಂದ ಸೋಂಕಿತ ಪಿ೯೪೬ ರನ್ನು ನೇರ ಕ್ವಾರಂಟೈನ್ಗೆ ಕಳುಹಿಸಲು ಸಾಧ್ಯವಾಗಿದೆ. ಕುಮಟಾ ತಾಲೂಕಾಡಳಿತದ ಕ್ರಮಗಳು ಶ್ಲಾಘನೀಯವಾಗಿದೆ ಎಂದರು.
ಪೂಲ್ ಟೆಸ್ಟಿಂಗ್ ಮೂಲಕ ೨೫ ಜನರಿಗೆ ಒಂದೇ ಬಾರಿಗೆ ತಪಾಸಣೆ ನಡೆಸಿ ಪಾಸಿಟಿವ್ ಬಂದರೆ ಒಬ್ಬೊಬ್ಬರದೇ ಪ್ರತ್ಯೇಕ ತಪಾಸಣೆ ಮಾಡಲಾಗುವುದು. ಈಗಾಗಲೇ ಸೋಂಕಿತ ೨೮ ಜನರಲ್ಲಿ ಹೆಚ್ಚಿನವರ ಆರೋಗ್ಯ ಸ್ಥಿರವಾಗಿದೆ. ಭಟ್ಕಳ, ಹಳಿಯಾಳ, ಶಿರಸಿಯಲ್ಲಿ ೧೦೦ ಬೆಡ್?ಗಳ ಕರೊನಾ ಆಸ್ಪತ್ರೆ ಸಜ್ಜುಗೊಳಿಸಲಾಗಿದೆ. ಒಂದೊಮ್ಮೆ ಸೋಂಕಿತರ ಸಂಖ್ಯೆ ಜಾಸ್ತಿಯಾದರೆ ಆಯಾ ತಾಲೂಕು ಕೇಂದ್ರಗಳಲ್ಲೇ ಚಿಕಿತ್ಸೆ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನದಲ್ಲಿ ಲಾಕ್?ಡೌನ್ ಸಡಿಲಿಕೆ ಬಳಿಕ ಜನ ಇನ್ನೂ ಹೆಚ್ಚು ಜಾಗೃತಿ ಪ್ರದರ್ಶಿಸಬೇಕಾಗುತ್ತದೆ. ಪರಸ್ಪರ ಮೂರಡಿ ಅಂತರ ಹಾಗೂ ಮಾಸ್ಕ ಧಾರಣೆ ಕಡ್ಡಾಯ. ಜನ ಸ್ವಯಂ ಪ್ರಜ್ಞೆಯಿಂದ ಜಾಗೃತಿ ಪ್ರದರ್ಶಿಸಬೇಕು. ಕರೊನಾ ತಡೆ ಹೋರಾಟದಲ್ಲಿ ಸಾರ್ವಜನಿಕರು ನಮ್ಮ ಪ್ರಯತ್ನಕ್ಕೆ ಮುಂದೆಯೂ ಕೈಜೋಡಿಸುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದರು. ಉಪವಿಭಾಗಧಿಕಾರಿ ಅಜಿತ್ ಎಂ.ರೈ, ತಾಪಂ ಇಓ ಸಿ.ಟಿ.ನಾಯ್ಕ, ತಹಸೀಲ್ದಾರ್ ಮೇಘರಾಜ ನಾಯ್ಕ ಇದ್ದರು.

error: