March 21, 2023

Bhavana Tv

Its Your Channel

ದಿ. ಮೋಹನ ಶೆಟ್ಟಿ ಟ್ರಸ್ಟ ವತಿಯಿಂದ ಟೆಂಪೋ ಚಾಲಕ ಮಾಲಕರಿಗೆ ದಿನಸಿ ಕಿಟ್ ವಿತರಣೆ

ಕುಮಟಾ : ಲಾಕ್ ಡೌನ್ ನಿಂದ ಟೆಂಪೋ ಚಾಲಕ ಮಾಲಕರು ತೀವೃ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಅವರಿಗೆ ಈ ಸಮಯದಲ್ಲಿ ಸಹಾಯ ಮಾಡುವುದರ ದೃಷ್ಟಿಯಿಂದ ದಿ.ಮೋಹನ ಶೆಟ್ಟಿ ಟ್ರಸ್ಟ್ ವತಿಯಿಂದ ಈ ಹಿಂದೆ ಬಡವರಿಗೆ, ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಗಿದ್ದು, ೨ ನೆಯ ಹಂತದಲ್ಲಿ ಟೆಂಪೋ ಚಾಲಕರಿಗೆ, ಮಾಲಕರಿಗೆ ಹಾಗೂ ನಿರ್ವಾಹಕರಿಗೆ ಅಗತ್ಯ ವಸ್ತುಗಳನ್ನು ಒಟ್ಟೂ ೧೦೦ ಟೆಂಪೋ ಚಾಲಕ, ಮಾಲಕರು ಹಾಗೂ ನಿರ್ವಾಹಕರಿಗೆ ದಿ.ಮೋಹನ್ ಶೆಟ್ಟಿ ಟ್ರಸ್ಟ್ ವತಿಯಿಂದ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ನಂತರ ಮಾತನಾಡಿದ ಮಾಜಿ ಶಾಸಕಿ ಶಾರದಾ ಶೆಟ್ಟಿ ಮೋಹನ ಶೆಟ್ಟಿ ಜನಸೇವೆಯೇ ಮುಖ್ಯವಾಗಿಸಿಕೊಂಡು, ಹಗಲಿರುಳು ಜನ ಸೇವೆ ಮಾಡಿದ್ದರು. ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಿಕೊಂಡು ನಾವು ಬಡವರ ಸೇವೆ ಮಾಡುತ್ತಿದ್ದೇವೆ, ಕಾರ್ಮಿಕರಿಗೆ ಹಾಗೂ ಆಟೋ ಚಾಲಕರಿಗೆ ಸರ್ಕಾರ ನೆರವು ಘೋಷಿಸಿದೆ. ಅದರಂತೆ ಟೆಂಪೋ ಚಾಲಕರಿಗೂ ನೆರವು ಘೋಷಿಸಲು ಒತ್ತಾಯಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕಮಾರ ಹಾಗೂ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಪತ್ರ ಬರೆಯತ್ತೇನೆ ಎಂದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ,
ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷರಾದ ಮಧುಸೂದನ ಶೇಟ್, ದೀಪಾ ನಾಯ್ಕ, ಪುರಸಭಾ ಸದಸ್ಯ ಎಂ.ಟಿ.ನಾಯ್ಕ, ಮಾಜಿ ಸದಸ್ಯೆ ಅನಿತಾ ಮಾಪಾರಿ, ಪ್ರಮುಖರಾದ ಮನೋಜ ನಾಯಕ, ಸಚಿನ ನಾಯ್ಕ, ನಿತ್ಯಾನಂದ ನಾಯ್ಕ, ಗಜು ನಾಯ್ಕ, ವಿನು ಜಾರ್ಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

About Post Author

error: