April 25, 2024

Bhavana Tv

Its Your Channel

ಮಾನವೀಯ ಮೌಲ್ಯಕ್ಕೆ ಅಪಚಾರವೆಸಗುವ ಧೋರಣೆೆ-ಸುನೀಲ್ ನಾಯ್ಕ, ಶಾಸಕರು ಭಟ್ಕಳ.

ಭಟ್ಕಳದ ಕೊರೊನಾ ಸೋಂಕಿತರನ್ನು ಮೆಡಿಕಲ್ ಕಾಲೇಜಿಗೆ ಸೇರಿಸದೇ ಭಟ್ಕಳಲ್ಲೆ ಇಟ್ಟು ಚಿಕಿತ್ಸೆ ನೀಡಬೇಕೆಂದು ಕಾರವಾರದ ಕೆಲವು ಜನನಾಯಕರು, ಮತ್ತಿತರ ಸಮಾಜ ಸೇವಕರು ಪತ್ರಿಕಾ ಹೇಳಿಕೆ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯುತ್ತಿರುವುದು ಮಾನವೀಯ ಮೌಲ್ಯಕ್ಕೆ ಅಪಚಾರವೆಸಗುವ ಧೋರಣೆಯೆನಿಸುತ್ತದೆ-.
ಭಾರತೀಯರು ವಿಶ್ವ ಮಾನವ ಸಂದೇಶದ ಪ್ರತಿಪಾದಕರಾಗಿದ್ದು, ಸರ್ವರನ್ನು ಸಮುಷ್ಠಿ ಭಾವದಿಂದ ಕಂಡು ಸತ್ಕರಿಸುವ ಶ್ರೀಮಂತ ಪರಂಪರೆ ಹೊಂದಿರುವ ನಾವು ಸಂಕುಚಿತಮನೋಭಾವನೆಯಿoದ ಸೀಮಿತ ದೃಷ್ಠಿ ಕೋನದಿಂದ ರೋಗಿಗಳನ್ನು ಕಾಣುವುದು ಅವರ ನೈತಿಕ ಸ್ಥೆöÊರ್ಯ ಕಳೆದುಕೊಳ್ಳುವಂತೆ ಮಾಡುತ್ತದೆ.
ಮನುಕುಲ ಅಪಾಯಕ್ಕೆ ಸಿಲುಕಿದಾಗ ಸ್ಪಂದಿಸಿ ಸಾಂತ್ವನ ಹೇಳಿ ನೈತಿಕ ಸ್ಥೆöÊರ್ಯ ತುಂಬುವ ಮೂಲಕ ಪುನ: ಅವರಲ್ಲಿ ಜೀವನೋತ್ಸಾವ ತುಂಬಬೇಕು. ಜಾತಿ, ಧರ್ಮ, ರಾಜಕೀಯ ಮೀರಿ ಆಪತ್ಕಾಲದಲ್ಲಿ ನೆರವಿಗೆ ಧಾವಿಸುವುದು ನಮ್ಮೆಲ್ಲರ ಆದ್ಯತೆಯ ಕಾರ್ಯವಾಗಬೇಕು.
ಭಟ್ಕಳದಲ್ಲಿ ಅತ್ಯಾಧುನಿಕ, ಸಕಲ ಸೌಲಭ್ಯವುಳ್ಳ ಆಸ್ಪತ್ರೆಯಿಲ್ಲದ ಕಾರಣ ಜೀವನ್ಮರಣದ ಹೋರಾಟದಲ್ಲಿರುವ ಕೊರೊನಾ ಸೋಂಕಿತರನ್ನು ಕಾರವಾರಕ್ಕೆ ಕಳುಹಿಸಲಾಗುತ್ತಿದೆ. ವೆಂಟಿಲೇಟರ್, ಐಸೋಲೇಷನ್, ಪರಿಣಿತ ವೈದ್ಯರು, ನರ್ಸ್ಗಳು ಮೆಡಿಕಲ್ ಕಾಲೇಜಿನಲ್ಲಿದ್ದು ನುರಿತ ಪಿಜಿಸಿಯೋನ್‌ಗಳು ಇರುವುದರಿಂದ ಬದುಕಿಸುವ ಭರವಸೆ ಹೊತ್ತು ಕಾರವಾರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ತನಕ ಭಟ್ಕಳದ ಸೋಂಕಿತರಿಗೆ ಯೋಗ್ಯ, ಆತಿಥ್ಯ, ಉಪಚಾರ ನೀಡಿ ಗುಣಮುಖರಾಗಿ ಕೃತಜ್ಞತಾಭಾವದಿಂದ ೧೧ ರೋಗಿಗಳು ಹಿಂದಿರುಗಿದ್ದಾರೆ. ಉಳಿದವರನ್ನು ಸಹ ಇದೆ ಆಶಾಭಾವನೆಯಿಂದ ಕಾರವಾರಕ್ಕೆ ಕಳಿಸಲಾಗುತ್ತಿದೆಯೇ ವಿನ: ಇದರಲ್ಲಿ ಬೇರಾವುದೇ ದುರಾಲೋಚನೆಗಳಿರುವುದಿಲ್ಲ.
ನನ್ನ ಭಟ್ಕಳ-ಹೊನ್ನಾವರ ಮತಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸೌಲಭ್ಯವಿದ್ದು ಈ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದರೆ ಜಿಲ್ಲೆಯ ಯಾವುದೇ ಮೂಲೆಯ ಸೋಂಕಿತರನ್ನು ಇಲ್ಲಿಗೆ ಕರೆಸಿ ಚಿಕಿತ್ಸೆ ಕೊಡಿಸುವುದು ಮಾತ್ರವಲ್ಲದೇ ನಾನೇ ಖುದ್ದಾಗಿ ಆಡಳಿತ ವ್ಯವಸ್ಥೆಯ ಸಂಪರ್ಕದಲ್ಲಿದ್ದು ಸ್ಪಂದಿಸುವ ವ್ಯವಸ್ಥೆ ಮಾಡುತ್ತಿದ್ದೆ. ಆದರೆ ಸರ್ಕಾರ ಮೆಡಿಕಲ್ ಕಾಲೇಜ್‌ನ್ನು ಕಾರವಾರಕ್ಕೆ ನೀಡಿದ್ದು ಇದನ್ನು ಜಿಲ್ಲೆಯ ಜನತೆ ಸದ್ಬಳಕೆ ಮಾಡಿಕೊಳ್ಳಬೇಕೆಂಬ ಉದ್ಧೇಶ ಹೊಂದಿರುತ್ತೇನೆ.
ಕಾರವಾರದ ಕೆಲ ಜನ ನಾಯಕರು ಹಾಗೂ ಕೆಲವು ಧುರೀಣರು ಭಟ್ಕಳಿಗರ ಕುರಿತು ಇಲ್ಲದ ಭಯ ಸೃಷ್ಠಿಸಿ ನೀಡುತ್ತಿರುವ ಹೇಳಿಕೆಯಿಂದ ಹಿಂದೆ ಸರಿದು ಸರ್ವರನ್ನು ಸಮಾನ ದೃಷ್ಠಿಯಿಂದ ಕಂಡು ರೋಗಿಯ ವಿರುದ್ಧದ ಬದಲು ರೋಗದ ವಿರುದ್ಧ ಹೋರಾಡಿ ಕೊರೊನಾವನ್ನು ಹೋಗಲಾಡಿಸಲು ಒಗ್ಗಟ್ಟಾಗುವ ಅವಶ್ಯಕತೆಯಿದೆ ಎಂದು ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸುನೀಲ್ ಬಿ. ನಾಯ್ಕ ತಿಳಿಸಿದ್ದಾರೆಂದು ಶಾಸಕರ ಭಟ್ಕಳ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

error: