September 16, 2024

Bhavana Tv

Its Your Channel

ವಾಟ್ಸಪ್ ಗ್ರೂಪ್‌ನಲ್ಲಿ ಶಾಸಕರ ತೇಜೋವಧೆ ಆರೋಪ: ದೂರು

ಭಟ್ಕಳ: “ಹೋಟೆಲ್ ಗೋಲ್ಡ್ ಪುಂಜ್ ಹಟಾವೋ” ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಅವರ ವಿರುದ್ಧ ತೇಜೋವಧೆ ಮಾಡುವ ಬರಹಗಳನ್ನು ಪ್ರಕಟಿಸುತ್ತಿರುವುದನ್ನು ಮುಂದುವರಿಸಲಾಗಿದ್ದು ಗ್ರೂಪ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕರ ಆಪ್ತ ಕಾರ್ಯದರ್ಶಿ ಕರಿಯಪ್ಪ ನಾಯ್ಕ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
“ಕೊರೊನಾ ಸೋಂಕಿನಿoದ ಜನಜೀವನ ಅಸ್ತವ್ಯಸ್ತ ಆಗಿರುವ ಈ ಸಂದರ್ಭದಲ್ಲಿ ವರ್ಗಗಳ ನಡುವೆ ವೈಮನಸ್ಸು ಬೆಳೆಸುವ ಹೇಳಿಕೆಗಳನ್ನು ಗ್ರೂಪ್‌ನಲ್ಲಿ ಹರಿಯ ಬಿಡಲಾಗುತ್ತಿದೆ. ಏಪ್ರಿಲ್ ೧೮ರಿಂದ ಈ ಕೃತ್ಯವನ್ನು ನಡೆಸುತ್ತಿದ್ದು, ಗ್ರೂಪ್ ಅಡ್ಮಿನ್‌ಗಳಾದ ದಿನೇಶ ನಾಯ್ಕ ಚೌಥನಿ, ರಮೇಶ ನಾಯ್ಕ ಹಡೀನ್‌ಬಾಳ್, ಮುಕುಂದ ನಾಯ್ಕ ಶಾರದೊಳೆ ಹಾಗೂ ವಿನೋದ್ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: