July 11, 2024

Bhavana Tv

Its Your Channel

ಬೇರೆ ರಾಜ್ಯದ ಕಾರ್ಮಿಕರನ್ನು ಹುಬ್ಬಳ್ಳಿಯಿಂದ ರೈಲಿನ ಮೂಲಕ ರಾಜಸ್ಥಾನಕ್ಕೆ

ಭಟ್ಕಳ: ಕೋರೋನಾ ಲಾಕ್ ಡಾನ್ ನಿಂದಾಗಿ ಬೇರೆ ರಾಜ್ಯದ ಕಾರ್ಮಿಕರು ಭಟ್ಕಳದಲ್ಲಿ ಕೆಲಸ ಮಾಡಿಕೊಂಡಿದ್ದು ಅಂತಹವರನ್ನು ಗುರುತಿಸಿ ಮೊದಲ ಹಂತವಾಗಿ ೩೧ ಮಂದಿಯನ್ನು ತಾಲೂಕಾಡಳಿತದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಹುಬ್ಬಳ್ಳಿಯಿಂದ ರೈಲಿನ ಮೂಲಕ ರಾಜಸ್ಥಾನಕ್ಕೆ ಕಳುಹಿಸಿಕೊಡಲಾಯಿತು.ಸರಕಾರದ ಆದೇಶದಂತೆ ಭಟ್ಕಳ ತಾಲೂಕಾಢಳಿತ ಸದ್ಯ ರಾಜಸ್ಥಾನದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ಕೆಲಸ ಮಾಡಿದ್ದು ತಾಲೂಕಿನ ಹುರುಳಿಸಾಲ್, ಅಲ್ ಖಲೀಜ್ ಹೋಟೆಲ್ ರಂಗೀನಕಟ್ಟೆ, ಮಣ್ಕುಳಿ, ಮುರುಡೇಶ್ವರದ ಒಟ್ಟು ೩೧ ಮಂದಿಯನ್ನು ಇಲ್ಲಿನ ತಹಸೀಲ್ದಾರ ಕಚೇರಿ ಸಮೀಪ ಎಲ್ಲರನ್ನೂ ಕರೆಯಿಸಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರೀಕ್ಷೆ ಮಾಡಿ ಅವರ ಹೆಸರನ್ನು ಪರಿಶೀಲನೆ ಮಾಡಲಾಯಿತು. ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಮೂಲಕ ಹುಬ್ಬಳ್ಳಿಗೆ ಕಳುಹಿಸಲಾಯಿತು. ರಾಜಸ್ಥಾನಕ್ಕೆ ೯ ಗಂಟೆಗೆ ಹುಬ್ಬಳ್ಳಿಯಿಂದ ರೈಲ್ವೆ ಮೂಲಕ ಅವರ ಊರಿಗೆ ತಲುಪಲಿದ್ದಾರೆ. ಹುಬ್ಬಳ್ಳಿಯಲ್ಲಿ ಜಿಲ್ಲೆಯಿಂದ ೨೫೬ ಮಂದಿ ರಾಜಸ್ಥಾನ ವಲಸೆ ಕಾರ್ಮಿಕರು ಜಮಾವಣೆಯಾಗಲಿದ್ದು, ಹುಬ್ಬಳ್ಳಿಯಲ್ಲಿ ಇನ್ನೊಂದು ಹಂತದಲ್ಲಿ ಕಾರ್ಮಿಕರು ಪರಿಶೀಲನೆ ಮಾಡಿ ರೈಲ್ವೆ ಮೂಲಕ ಕಳುಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಉಪ ತಹಸೀಲ್ದಾರ ಭಾಸ್ಕರ ಭಟ್ಟ, ವಲಸೆ ಕಾರ್ಮಿಕ ವಿಭಾಗದ ಅಂತರ ರಾಜ್ಯ ತಾಲೂಕಾ ನೋಡೆಲ್ ಅಧಿಕಾರಿ ಸಂಶುದ್ದೀನ್, ವಲಸೆ ಕಾರ್ಮಿಕರ ವಿಭಾಗ ಜಿಲ್ಲಾ ನೋಡಲ್ ಅಧಿಕಾರಿ ಪುರುಷೋತ್ತಮ, ಭಟ್ಕಳ ಕಾರ್ಮಿಕ ಇನ್ಸ್ಪೆಪೆಕ್ಟರ್ ರೇಖಾ, ಮೀನುಗಾರಿಕಾ ಇಲಾಖೆ ಅಧಿಕಾರಿ ಚೇತನ್ ಸೇರಿದಂತೆ ತಹಸೀಲ್ದಾರ ಕಚೇರಿ ಸಿಬ್ಬಂದಿ ನಾಗರಾಜ ಮೋಗೇರ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಇದ್ದರು.

error: