December 20, 2024

Bhavana Tv

Its Your Channel

ಯಕ್ಷಗಾನ ಕಲಾವಿದರು, ಪತ್ರಿಕಾ ಏಜೆಂಟರಿಗೆ, ಪತ್ರಿಕಾವಿತರಕರಿಗೆ ಕಾರ್ಮಿಕ ಇಲಾಖೆಯ ಕಿಟ್ ವಿತರಿಸಿದ ಶಾಸಕ ದಿನಕರ ಶೆಟ್ಟಿ .

ಕುಮಟಾ :ತಾಲೂಕಿನ ಯಕ್ಷಗಾನ ಹಿಮ್ಮೇಳ-ಮುಮ್ಮೇಳ ಕಲಾವಿದರಿಗೆ ಹಾಗೂ ಪತ್ರಿಕಾ ಎಜೆಂಟರು, ವಿತರಕರಿಗೆ ಶಾಸಕ ದಿನಕರ ಶೆಟ್ಟಿ ಜೀವನಾವಶ್ಯಕ ಸಾಮಗ್ರಿ ಕಿಟ್‌ಗಳನ್ನು ಡಯಟ್ ಆವಾರದಲ್ಲಿ ಮಂಗಳವಾರ ವಿತರಿಸಿದರು.


ನಂತರ ಮಾತನಾಡಿದ ಶಾಸಕರು, ಯಕ್ಷಗಾನ ಕಲಾವಿದರು ರಾತ್ರಿಯಿಡೀ ನಿದ್ದೆಗೆಟ್ಟು ನಮ್ಮ ಕಲೆ, ಸಂಸ್ಕೃತಿ ಹಾಗೂ ಕನ್ನಡ ಭಾಷೆಯ ಉಳಿವು-ಬೆಳವಣಿಗೆಗಾಗಿ ದುಡಿದು ಕಠಿಣ ಪರಿಶ್ರಮದಿಂದ ಗೌರವಯುತ ಬದುಕನ್ನು ನಡೆಸುವವರು. ಲಾಕ್‌ಡೌನ್‌ನಿಂದ ಬಹಳಷ್ಟು ಕಲಾವಿದರು ಸಂಕಟದ ಪರಿಸ್ಥಿತಿಯಲ್ಲಿದ್ದರೂ ತಾವಾಗಿ ಹೇಳಿಕೊಳ್ಳುತ್ತಿಲ್ಲ. ಹಾಗೆಯೇ ಪತ್ರಿಕಾ ವಿತರಕರಿಗೂ ನೆರವಿನ ಅಗತ್ಯವಿರುವದನ್ನು ಮನಗಂಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಸಹಕಾರದಿಂದ ಯಕ್ಷಗಾನ ಕಲಾವಿದರು ಹಾಗೂ ಪತ್ರಿಕಾ ವಿತರಕರಿಗೆ ಕಾರ್ಮಿಕ ಇಲಾಖೆಯಡಿ ನೀಡಲಾದ ಜೀವನಾವಶ್ಯಕ ಸಾಮಗ್ರಿಗಳ ಕಿಟ್‌ನ್ನು ಇಂದು ವಿತರಿಸಲು ಸಾಧ್ಯವಾಗುತ್ತಿದೆ. ಬಿಜೆಪಿ ಸರ್ಕಾರ ಸದಾ ಕಷ್ಟದಲ್ಲಿರುವವರ ಬೆನ್ನಿಗೆ ನಿಂತಿದೆ. ಲಾಕ್‌ಡೌನ್ ನಿಯಮ ಪಾಲಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಿ ಎಂದರು.
ಈ ವೇಳೆ ಡಾ. ಜಿ.ಜಿ.ಹೆಗಡೆ. ಅಶೋಕ ಭಟ್ಟ, ವೆಂಕಟೇಶ ನಾಯಕ, ಹೇಮಂತಕುಮಾರ ಗಾಂವಕರ, ಯಕ್ಷಗಾನ ಕಲಾವಿದರಾದ ಸರ್ವೇಶ್ವರ ಹೆಗಡೆ ಕೋಣಾರೆ, ರಮೇಶ ಭಂಡಾರಿ, ನರಸಿಂಹ ಹೆಗಡೆ, ಗಣಪತಿ ಹೆಗಡೆ, ಪತ್ರಿಕಾ ವಿತರಕರಾದ ಎನ್.ಜಿ.ವೈದ್ಯ, ರಾಘವೇಂದ್ರ, ಈಶ್ವರ, ನರಸಿಂಹ, ಗಣಪತಿ, ಉದಯ, ಶಂಕರ ಇನ್ನಿತರರು ಇದ್ದರು

error: