ಮoಡ್ಯ; ನೆರೆಯ ಮಹಾರಾಷ್ಟçದಿಂದ ರಾಜ್ಯದ ಮಂಡ್ಯದ ಜಿಲ್ಲೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಸೇರಿದಂತೆ ವಿದ್ಯಾರ್ಥಿಗಳು ಆಗಮಿಸಿದ್ದರು. ಆದರೆ ಇವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ ಹೆಚ್ಚಿನ ಜನರಲ್ಲಿ ಸೊಂಕು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಮಂಗಳವಾರ ಪತ್ತೆಯಾಗಿರುವ ಎಲ್ಲಾ ೬೨ ಕೊರೋನಾ ಸೋಂಕಿತ ವ್ಯಕ್ತಿಗಳು ಮುಂಬೈನಿ0ದ ಆಗಮಿಸಿದವರು ಎಂದು ಜಿಲ್ಲಾಧಿಕಾರಿ ಎಂ.ವಿ.ವೆ0ಕಟೇಶ್ ಮಾಹಿತಿ ನೀಡಿದರು.
ಇಂದು ಕೊವಿಡ್-೧೯ ಕುರಿತ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಮುಂಬೈನ ಸಂತ ಕ್ರೂಸ್, ಅಂಧೇರಿ, ನೆಹರು ನಗರ, ವಿಲೇ ಪಾರ್ಲೆ ಮತ್ತು ಮುಂಬೈ ಪಶ್ಚಿಮದಲ್ಲಿ ಬಹಳ ವರ್ಷಗಳಿಂದ ಬ್ಯಾಂಕ್, ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದರು. ಅವರ ಗಂಟಲ ದ್ರವಗಳನ್ನು ಸಂಗ್ರಹಿಸಿ ತಪಾಸಣೆ ಕಳುಹಿಸಲಾಗಿತ್ತು. ಪ್ರತಿಯೊಬ್ಬರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು ಎಂದರು. ೬೨ ಸೋಂಕಿತ ಪ್ರಕರಣದಲ್ಲಿ ೪೧ ಪ್ರಕರಣಗಳು ಕೆ.ಆರ್.ಪೇಟೆ, ೨೧ ಪ್ರಕರಣಗಳು ನಾಗಮಂಗಲದಲ್ಲಿ ವರದಿಯಾಗಿವೆ. ಇವರಲ್ಲಿ ೨೬ ಪುರುಷರು, ೨೩ ಮಹಿಳೆಯರು, ೭ ಗಂಡು, ೬ ಹೆಣ್ಣು ಮಕ್ಕಳಿದ್ದಾರೆ. ಈ ಪೈಕಿ ೧ ವರ್ಷದ ಮಗುವಿನಿಂದ ೬೫ ವರ್ಷದ ವೃದ್ಧರವರೆಗೆ ಎಲ್ಲಾ ವಯೋಮಾನದವರೂ ಇದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಸೋಂಕಿತರ ಚಿಕಿತ್ಸೆಗಾಗಿ ೩೫೦ ಹಾಸಿಗೆಗಳನ್ನು ಮೀಸಲಿರಿಸಲಾಗಿದ್ದು, ಅದನ್ನು ಇನ್ನಷ್ಟು ಹೆಚ್ಚಿಸಲಾಗುವುದು. ತಾಲೂಕು ಕೇಂದ್ರಗಳಲ್ಲಿ ಕ್ವಾರಂಟೈನ್ ಕೇಂದ್ರಗಳ ನಿಯೋಜನೆ, ಅಧಿಕಾರಿಗಳ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯ ಜನತೆಗೆ ಇಂದು ಒಂದೇ ದಿನದಲ್ಲಿ ೬೨ ಹೊಸ ಪ್ರಕರಣ ತಲ್ಲನ ಮೂಡಿಸಿದ್ದು ಮುಂದೆಯಾದರೂ ಜನತೆ ಎಚ್ಚೆತ್ತುಕೊಂಡು ಮುಂಜಾಗ್ರತೆಯ ಕ್ರಮವಾಗಿ ಮಾಸ್ಕ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.