September 14, 2024

Bhavana Tv

Its Your Channel

ಕರೋನಾ ಭಯದ ಮಧ್ಯೆ ತೆಂಗಿನ ಸಸಿ ಪಡೆಯಲು ನೂಕುನುಗ್ಗಲು

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ತೆಂಗಿನ ಸಸಿಗಳನ್ನು ಪಡೆದುಕೊಳ್ಳಲು ನೂಕುನುಗ್ಗಲು ಮಾಡಿಕೊಂಡ ಘಟನೆ ವರದಿಯಾಗಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಮುರುಕನಹಳ್ಳಿಯ ತೋಟಗಾರಿಕಾ ಕ್ಷೇತ್ರದಲ್ಲಿ ಬೆಳೆದಿರುವ ೧೪ ತಿಂಗಳ ತೆಂಗಿನ ಸಸಿಗಳಿಗೆ ಕೇವಲ ೬೦ರೂ ನಿಗಧಿಪಡಿಸಿ ಪ್ರತೀ ರೈತರಿಗೆ ೨೦ ಸಸಿಗಳ ವಿತರಣೆ ಮಾಡಲು ಸಜ್ಜಾಗಿದ್ದರು ತೆಂಗಿನ ಸಸಿ ಪಡೆಯಲು ರೈತರು ಒಮ್ಮೆಲೆ ಆಗಮಿಸಿದ ಹಿನ್ನಲೆಯಲ್ಲಿ ನೂಕುನುಗ್ಗಲು ಸಂಭವಿಸಿತು. ಪರಿಸ್ಥತಿ ಕೈಮಿರದಿರಲು ಸಾಮಾಜಿಕ ಅಂತರ ಕಾಪಾಡಲು ಪೋಲಿಸರಿಂದ ಹರಸಾಹಸ ಮಾಡುವ ದೃಶ್ಯ ಕಂಡುಬ0ದಿತು
ಕೃಷ್ಣರಾಜಪೇಟೆ ತಾಲ್ಲೂಕಿನ ಮುರುಕನಹಳ್ಳಿ ತೋಟಗಾರಿಕಾ ಕ್ಷೇತ್ರದ ಫಾರಂನಲ್ಲಿ ೧೦ಸಾವಿರಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ಬೆಳೆಯಲಾಗಿದ್ದು ರೈತರಿಗೆ ವಿತರಿಸುವ ಕಾರ್ಯವು ಭರದಿಂದ ಸಾಗಿದೆ..ತೆಂಗಿನ ಸಸಿಗಳನ್ನು ಪಡೆಯಲು ರೈತಬಾಂಧವರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಸರತಿಯ ಸಾಲಿನಲ್ಲಿ ನಿಂತು ಟೋಕನ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ತೆಂಗಿನ ಸಸಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ೨೫೦ರೂಗಳಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಇದೇ ಸಸಿಗಳನ್ನು ತೋಟಗಾರಿಕಾ ಇಲಾಖೆಯು ಸಚಿವ ನಾರಾಯಣಗೌಡರ ನಿರ್ದೇಶನದ ಮೇರೆಗೆ ಕೇವಲ ೬೦ರೂಗಳಿಗೆ ನೀಡುತ್ತಿರುವುದರಿಂದ ರೈತಬಾಂಧವರು ಸಸಿಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ. ತೋಟಗಾರಿಕೆ ಅಧಿಕಾರಿ ಡಾ.ಜಯರಾಂ ತೆಂಗಿನ ಸಸಿಗಳ ವಿತರಣೆ ಬಗ್ಗೆ ಮಾತನಾಡಿ ತೆಂಗಿನ ಸಸಿಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ರೈತರಿಗೆ ಪ್ರಸ್ತುತ ನೀಡುತ್ತಿರುವ ಪ್ರಮಾಣವನ್ನು ಕಡಿತಗೊಳಿಸಲಾಗಿದೆ. ರೈತ ಬಾಂಧವರು ನಿಧಾನವಾಗಿ ಆಗಮಿಸಿ ಸಸಿಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದ್ದಾರೆ.

error: