May 29, 2023

Bhavana Tv

Its Your Channel

ಕೆ.ಆರ್.ಪೇಟೆಯಿಂದ ಚೆನ್ನರಾಯಪಟ್ಟಣ ಹಾಗೂ ಮೈಸೂರಿಗೆ ಬಸ್ ಸಂಚಾರ ಆರಂಭ

ಮಂಡ್ಯ ; ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಿಂದ ಚನ್ನರಾಯಪಟ್ಟಣ ಹಾಗೂ ಮೈಸೂರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಆರಂಭಗೊ0ಡಿತು. ಎರಡು ತಿಂಗಳ ನಂತರ ಆರಂಭವಾದ ಬಸ್ ಸಂಚಾರಕ್ಕೆ ನಾಗರೀಕರ ಸಂತಸಗೊ0ಡರು. ಒಂದು ಬಸ್ಸಿಗೆ ೩೦ ಪ್ರಯಾಣಿಕರ ಪ್ರಯಾಣಕ್ಕೆ ಸಾರಿಗೆ ಸಂಸ್ಥೆ ಅವಕಾಶ ಕಲ್ಪಿಸಿದ್ದಾರೆ, ಇದನ್ನು ಕೆ.ಆರ್.ಪೇಟೆ ಬಸ್ ಡಿಪೋ ವ್ಯವಸ್ಥಾಪಕರಾದ ಶಿವಕುಮಾರ್ ಅವರ ನೇತೃತ್ವದಲ್ಲಿ ಪರಿಶೀಲನೆಯ ಬಳಿಕ ಬಸ್ ಸಂಚಾರ ಆರಂಭಗೊ0ಡಿತು.
ನoತರ ಮಾತನಾಡಿದ ಡಿಪೋ ಮ್ಯಾನೆಜರ್ ಪ್ರಾರಂಭಿಕವಾಗಿ ಚನ್ನರಾಯಪಟ್ಟಣ ಹಾಗೂ ಮೈಸೂರಿಗೆ ಬಸ್ ಸಂಚಾರ ಆರಂಬಿಸಲಾಗಿದೆ. ೩೦ಜನರು ನಿರ್ಧಿಷ್ಠವಾದ ಸ್ಥಳಕ್ಕೆ ಪ್ರಯಾಣಿಸಲು ತೆರಳಿದರೆ ಬಸ್ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಯಾಣಮಾಡಬೇಕು..ಶಾಲಾ ಕಾಲೇಜುಗಳ ಆರಂಭದ ನಂತರ ಗ್ರಾಮೀಣ ಸಾರಿಗೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಡಿಪೋ ಮ್ಯಾನೇಜರ್ ಶಿವಕುಮಾರ್ ವಿವರಿಸಿದರು.
ಈ ಸಂದರ್ಭದಲ್ಲಿ ಸಂಚಾರ ನಿಯಂತ್ರಕರಾದ ಮುತ್ತೇಶ್ ಮೀನಾಕ್ಷಿ, ಪುಟ್ಟಸ್ವಾಮಿ, ಗಂಗಾಧರ, ನಿರ್ವಾಹಕರಾದ ಕುಮಾರಸ್ವಾಮಿ, ದಯಾನಂದ ಮತ್ತಿತರರು ಉಪಸ್ಥಿತರಿದ್ದರು

About Post Author

error: