May 30, 2023

Bhavana Tv

Its Your Channel

ಕೆ.ಆರ್.ಪೇಟೆ ಸುತ್ತಮುತ್ತ ಗಾಳಿ ಮಳೆಗೆ ಹಲವು ಮನೆಗಳಿಗೆ ಭಾರಿ ಹಾನಿ

ಮಂಡ್ಯ: ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಹೊಸಹೊಳಲು ಗ್ರಾಮದ ಹೊರವಲಯದಲ್ಲಿರುವ ಕೃಷ್ಣ ಎನ್ನುವವರಿಗೆ ಸೇರಲಾದ ಯುವಕನ ಇಟ್ಟಿಗೆ ಫ್ಯಾಕ್ಟ್ರಿ ನೆಲಸಮವಾಗಿದೆ. ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಹೊಸಹೊಳಲು ಗ್ರಾಮದ ಕೃಷ್ಣ ಎನ್ನುವ ಯುವಕ ಸಾಲ-ಸೋಲ ಮಾಡಿ ಸ್ಥಾಪಿಸಿದ್ದ ಇಟ್ಟಿಗೆ ಫ್ಯಾಕ್ಟರಿಯು ಮೇಲ್ಛಾವಣಿಯು ಕುಸಿದುಬಿದ್ದಿದ್ದು, ಸುಡಲು ಸಿದ್ಧಪಡಿಸಿದ್ದ ಸಾವಿರಾರು ಇಟ್ಟಿಗೆಗಳು ನಾಶವಾಗಿವೆ. ಇಟ್ಟಿಗೆ ಫ್ಯಾಕ್ಟರಿಯ ಮೇಲ್ಛಾವಣಿಯ ಶೀಟುಗಳು ಭಾರೀ ಬಿರುಗಾಳಿ ಮಳೆಗೆ ಹಾರಿಹೋಗಿವೆ. ಇಟ್ಟಿಗೆಗಳು ಮಳೆ ನೀರಿಗೆ ಕರಗಿ ಹೋಗಿವೆ. ಇಟ್ಟಿಗೆ ಫ್ಯಾಕ್ಟರಿಯು ತನ್ನ ಕಣ್ಣಮುಂದೆಯೇ ನಾಶವಾಗಿರುವುದನ್ನು ಕಂಡು ಕೃಷ್ಣ ಮನನೊಂದಿದ್ದು ಸರ್ಕಾರ ಹಾಗೂ ಕ್ಷೇತ್ರದ ಶಾಸಕರಾದ ಸಚಿವ ನಾರಾಯಣಗೌಡರು ಸಹಾಯ ಹಸ್ತವನ್ನು ನೀಡಬೇಕು ಎಂದು ಸುತ್ತಮುತ್ತಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ

About Post Author

error: