ಕುಮಟಾ ; ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಊರಿಗೆ ಬಂದಿದ್ದ ಯುವಕನೋರ್ವ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಳ್ಳುವ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿತ್ರಿಗಿಯ ಮಿಡ್ಲಗುಂದದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ರಾಜೇಶ ಮಾದೇವ ಪಟಗಾರ(೨೮) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ೬ ವರ್ಷದಿಂದ ಬೆಂಗಳೂರಿನ ಮಡಿವಾಳದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ ಪಟಗಾರ ತನ್ನ ಅಣ್ಣನ ಮದುವೆ ನಿಮಿತ್ತ ಮಾ. ೯ ರಂದು ಊರಿಗೆ ಬಂದಿದ್ದರು. ಮದುವೆ ಮುಗಿಸಿ ಮಾ. ೨೩ ರಂದು ಮರಳಿ ಉದ್ಯೋಗಕ್ಕೆ ಹೋಗಬೇಕಾಗಿತ್ತು. ಲಾಕ್‌ಡೌನ್‌ನಿಂದ ಬೆಂಗಳೂರಿಗೆ ಹೋಗಲಾಗದೇ ಇದ್ದುದರಿಂದ ಉದ್ಯೋಗ ಕಳೆದುಕೊಳ್ಳುವ ಭವಿಷ್ಯದ ಚಿಂತೆಯಲ್ಲಿ ಮನೆಯ ಬಚ್ಚಲಿನ ಪಕಾಸಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ರಾಜೇಶ ಪಟಗಾರ ಸಹೋದರ ಗಜಾನನ ಮಾದೇವ ಪಟಗಾರ ದೂರಿನಂತೆ ಕುಮಟಾ ಠಾಣೆಯಲ್ಲಿ ಪ್ರಕರಣ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ