
ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ಶಿವಪುರ ಗ್ರಾಮದಲ್ಲಿ ಸಿಡಿಲು ಬಡಿದು ರ‍್ವ ರೈತ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಶಿವಪುರ ಗ್ರಾಮದ ತೋಪಯ್ಯ ಅವರ ಮಗ ಪಾಪಣ್ಣ(೬೦)ಎಂಬುವವರು ಸಿಡಿಲು ಬಡಿದು ಮೃತಪಟ್ಟಿರುವ ರೈತ. ಭಾನುವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಸುಮಾರು ೯ಗಂಟೆಯ ಸಮಯದಲ್ಲಿ ಗುಡುಗು ಮಿಂಚು ಸಮೇತ ಬಡಿದ ಸಿಡಿಲಿನ ಸ್ರ‍್ಷಕ್ಕೆ ಪಾಪಣ್ಣ ಅವರು ಮೃತಪಟ್ಟಿದ್ದಾರೆ. ಅದೇ ಮನೆಯಲ್ಲಿದ್ದ ನಾಗರಾಜು(೪೦) ಮತ್ತು ಮೊಮ್ಮಗಳು ಶ್ರೇಯ (೭)ಅವರಿಗೆ ಸಿಡಿಲಿನ ತೀವ್ರತೆಗೆ ಸಣ್ಣಪುಟ್ಟ ಗಾಯಗಳು ಉಂಟಾಗಿದ್ದು ಕೆ.ಆರ್.ಪೇಟೆ ಪಟ್ಟಣದ ರ‍್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಮನೆ ಮನೆಗೆ ಮಂಜಣ್ಣ ಎಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆ.ಡಿ.ಎಸ್ ಅಭ್ಯರ್ಥಿ ಹೆಚ್ ಟಿ ಮಂಜು
ವಿಜೃಂಭಣೆಯಿoದ ನಡೆದ ಶ್ರೀ ಗವಿರಂಗನಾಥ ದೇವಾಲಯದ ಬ್ರಹ್ಮ ರಥೋತ್ಸವ
ಉಚಿತ ದಂತ ತಪಾಸಣಾ ಶಿಬಿರ