July 11, 2024

Bhavana Tv

Its Your Channel

ಕೊರೊನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷರಾದ ಬಿ.ಎಂ ಕಿರಣ್ ರವರಿಂದ ಆಹಾರದ ಕಿಟ್, ಛತ್ರಿ, ಸ್ಯಾನಿಟೇಜರ್ ವಿತರಣೆ

ಮಂಡ್ಯ ; ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ಹೋಬಳಿಯ ಆಶಾ ಕಾರ್ಯಕರ್ತೆಗೆ ಕಿಕ್ಕೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಶಾ ಕಾರ್ಯಕರ್ತೆ ಪರಿಶ್ರಮವನ್ನು ಗುರುತಿಸಿ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅದ್ಯಕ್ಷರು ಹಾಗೂ ಜೆ ಡಿ ಎಸ್ ನಾಯಕರಾದ ಬಿ.ಎಂ ಕಿರಣ್ ರವರು ಆಹಾರದ ಕಿಟ್, ಛತ್ರಿ, ಸ್ಯಾನಿಟೇಜರ್ ವಿತರಿಸಿದರು..

ಇದೇ ಸಂರ್ಭದಲ್ಲಿ ತಾಲ್ಲೂಕಿನ ಎಂ.ಪಿ.ಎಂ.ಸಿ ಅದ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್ ಮಾತನಾಡಿ ಸಮಾಜ ಸೇವಕರು ಹಾಗೂ ಜೆ ಡಿ ಎಸ್ ನಾಯಕರಾದ ಬಿ.ಎಂ ಕಿರಣ್ ರವರು ಕೊರೋನಾ ವೈರಸ್ ಇಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಮಾಡುತ್ತಾ ಬರುತ್ತಿದ್ದು ಜನರ ಮನಸ್ಸು ಗೆದ್ದಿದ್ದಾರೆ ಇಂತಹ ನವ ನಾಯಕರುಗಳು ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸುವಂತ ಶಕ್ತಿಯನ್ನು ದೇವರು ನೀಡಲಿ ಎಂದರು..

ಇದೇ ಸಂದರ್ಭದಲ್ಲಿ ಕಿಕ್ಕೇರಿ ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಜಯರಾಮು, ಸದಸ್ಯರಾದ ಕಾಯಿ ಮಂಜೇಗೌಡ, ಮುಖಂಡರಾದ ಬಿ.ಎಸ್ ಮಂಜುನಾಥ್, ಗೌತಮ್, ಕಾರ್ ಮಂಜು, ನಂಜೇಶಿ, ಮತ್ತು ಆಶಾ ಕಾರ್ಯಕರ್ತೆಯರುಗಳು ಇದ್ದರು..

error: