ಮಂಡ್ಯ; ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಲಾಕ್‌ಡೌನ್ ಬಳಿಕ ಆಟೋ ಚಾಲಕರು, ಸವಿತಾ ಸಮಾಜದವರು ಮತ್ತು ಛಾಯಾಗ್ರಾಹಕರು ಸೇರಿದಂತೆ ವಿವಿಧ ವೃತ್ತಿಗಳನ್ನು ನಡೆಸಿ ಜೀವನ ನಡೆಸುತ್ತಿದ್ದವರು ಸಂಕಷ್ಟದಲ್ಲಿದ್ದರು. ಇದನ್ನು ಗಮನಿಸಿದ ಕಾಂಗ್ರೇಸ್ ಯುವ ಮುಖಂಡರಾದ ಬಿ. ರೆವಣ್ಣ ದಿನಸಿ ಕಿಟ್ ನೀಡುವ ಕಾರ್ಯಕ್ರಮ ಆಯೋಜಿಸಿದ್ದರು. ಪಟ್ಟಣದ ವಾಜೀದ್ ಸರ್ಕಲ್ (ಐದು ದೀಪದ ವೃತ್ತ)ನಲ್ಲಿ ನಡೆದ ಬೃಹತ್ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ೬೮೦ ಆಟೋ ಚಾಲಕರು, ೩೫೦ ಸವಿತಾ ಸಮಾಜದ ಕುಟುಂಬಗಳು ಮತ್ತು ೧೭೫ ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದರು.
ನಂತರ ಮಾತನಾಡಿದ ಅವರು ಸಾವಿರಾರು ಜನರು ತೀವ್ರ ಕಷ್ಟಕ್ಕೆ ಸಿಲುಕಿದ್ದು, ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ನಿಮ್ಮ ಕಷ್ಟಕ್ಕೆ ನಾನು ಸ್ಪಂದಿಸುತ್ತೇನೆ. ಕರೊನಾ ಮಹಾಮಾರಿಯಿಂದ ಇಡೀ ಪ್ರಪಂಚವೇ ತತ್ತರಿಸಿದೆ. ಕೂಲಿಯನ್ನೇ ನಂಬಿ ಬದುಕು ನಡೆಸುವ ಕುಟುಂಬಗಳು ಕಷ್ಟಕ್ಕೆ ಸಿಲುಕಿವೆ.
ಇಂತಹ ಸಮಯದಲ್ಲಿ ಉಳ್ಳವರು ಬಡವರಿಗೆ ಸಹಾಯ ಮಾಡಬೇಕು. ನನ್ನ ತಾಲ್ಲೂಕಿನ ಜನರು ಯಾವುದೇ ರೀತಿಯ ಭಯ ಪಡುವುದು ಬೇಡ ನಿಮ್ಮ ಸಹಾಯಕ್ಕೆ ನಾನು ಸದಾ ಸಿದ್ದನಿದ್ದೇನೆ. ತಾಲ್ಲೂಕಿನ ೫ ಸಾವಿರ ಜನರಿಗೆ ಆಹಾರ ಕಿಟ್ ವಿತರಿಸಲಾಗುವುದು ಎಂದು ಸಮಾಜ ಸೇವಕ ಬಿ.ರೇವಣ್ಣ ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಲಾಕ್‌ಡೌನ್‌ನಿಂದ ಕಷ್ಟಕ್ಕೆ ಸಿಲುಕಿರುವ ಪಾಂಡವಪುರ ತಾಲ್ಲೂಕಿನ ಸಾವಿರಾರು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಬಿ.ರೇವಣ್ಣ ಒಬ್ಬ ಜನಪ್ರತಿನಿಧಿ ಮಾಡಬೇಕಿರುವ ಕೆಲಸವನ್ನು ಯಾವುದೇ ಅಧಿಕಾರ ಇಲ್ಲದೆಯೇ ಮಾಡಿದ್ದಾರೆ. ಪಾಂಡವಪುರ ತಾಲ್ಲೂಕಿನಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮ. ಕ್ಷೇತ್ರದ ಜನರು ಸದಾ ಕಾಲ ರೇವಣ್ಣನವರ ಬೆಂಬಲಕ್ಕೆ ನಿಲ್ಲಬೇಕು ಎಂದರು. ಕರೊನಾ ಕಾರ್ಯಪಡೆ ಅಧ್ಯಕ್ಷ ಸಿ.ಆರ್.ರಮೇಶ್ ಮಾತನಾಡಿ, ಬಿ.ರೇವಣ್ಣ ನಮ್ಮ ತಾಲ್ಲೂಕಿನ ಜನಪ್ರಿಯ ಯುವ ರಾಜಕಾರಣಿ. ಇವರಿಗೆ ಯಾವುದೇ ಅಧಿಕಾರ ಇಲ್ಲ. ಆದಾಗ್ಯೂ ಇವರು ಕೋಟ್ಯಾಂತರ ರೂಪಾಯಿ ಹಣವನ್ನು ಜನರ ಕಲ್ಯಾಣಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ಬಿ.ರೇವಣ್ಣ ಅವರ ಜನಸೇವೆ ಶ್ಲಾಘನೀಯ ಎಂದರು.
ಬಿ.ರೇವಣ್ಣ ವಿತರಿಸಿದ ಆಹಾರ ಕಿಟ್ ಪಡೆಯಲು ಪಟ್ಟಣದ ಐದು ದೀಪದ ವೃತ್ತದಿಂದ ಗ್ರೀನ್‌ಪಾರ್ಕ್ ತನಕ ಸಾಲು ನಿಂತಿದ್ದು ಸಾರ್ವಜನಿಕರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹುಚ್ಚೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣೇಗೌಡ, ದಯಾನಂದ ಬಾಬು, ಚಿಕ್ಕಮರಳಿ ಚಂದ್ರಶೇಖರ್,ಬನ್ನoಗಾಡಿ ಸ್ವಾಮಿ, ಕೆನ್ನಾಳು ತಮ್ಮಣ್ಣ, ಹಿರೇಮರಳಿ ಧನಂಜಯ್ಯ, ಆನುವಾಳು ವಿಜಿ, ಬಿ.ರೇವಣ್ಣ ಅಭಿಮಾನಿ ಸಂಘದ ಬಿ.ಟಿ.ಮಂಜುನಾಥ್, ವಿಷಕಂಠ, ಬಣ್ಣದ ಅಂಗಡಿ ಮಹದೇವು ಮುಂತಾದವರು ಇದ್ದರು.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ