September 17, 2024

Bhavana Tv

Its Your Channel

ಮಹಾರಾಷ್ಟ್ರದಿಂದ ಚಿಕಿತ್ಸೆಗೆ ಎಂದು ಬಿಂಬಿಸುವ ರೀತಿಯಲ್ಲಿ ಅಂಬುಲೆನ್ಸ ಮೂಲಕ ಕರೆತರುವ ಸಾರ್ವಜನಿಕರನ್ನು ಚೆಕಪೋಸ್ಟ ಪಡೆದ ತಡೆದ ಅಧಿಕಾರಿಗಳು

ಮಂಡ್ಯ: ರಾಜ್ಯದೆಲ್ಲಡೆ ಕರೋನಾ ಸದ್ದು ಮಾಡುತ್ತಿದೆ ಅದರಲ್ಲೂ ಮುಂಬೈನಿoದ ಬರುವವರ ಮೇಲೆ ನಿಗಾ ಇಡಲು ಸರ್ಕಾರ ಹಲವು ಕಾರ್ಯತಂತ್ರ ರೂಪಿಸಿದರೂ ಸಾರ್ವಜನಿಕರು ಸರ್ಕಾರ ಹಾಗೂ ಅಧಿಕಾರಿಗಳು ಕೆಲವಡೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಸಿಕ್ಕಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೋಕಿನ ಕಿಕ್ಕೇರಿ ಹೋಬಳಿಯ ಅನೆಗೂಳ ಚೆಕ್ ಪೋಸ್ಟ್ ಬಳಿ ಏಂ. ೪೦-ಉ. ೦೪೫೯ ಆಂಬುಲೆನ್ಸ್ ವಾಹನದಲ್ಲಿ ಇಬ್ಬರು ಬಾಂಬೆ ಇಂದ ಬರುತಿದ್ದ ಜನರನ್ನು ಕದ್ದು ಆಂಬುಲೆನ್ಸ್ ಡ್ರೈವರ್ ಲೋಕೇಶ್ ಎಂಬ ವ್ಯಕ್ತಿಯು ಸೈರೆನ್ ಹಾಕಿಕೊಂಡು ಬರುವ ರೀತಿಯಲ್ಲಿ ನಾಟಕ ಆಡುತಿದ್ದ ಹಿನ್ನಲೆಯಲ್ಲಿ ಡ್ರೈವರ್ ಹಾಗೂ ಇಬ್ಬರು ಬಾಂಬೆ ಇಂದ ಬರುತಿದ್ದ ವ್ಯಕ್ತಿಗಳನ್ನು ಚೆಕ್ಕ್ ಪೋಸ್ಟ್ ಬಳಿ ಅಡ್ಡಗಟ್ಟಿ ವಿಚಾರಣೆ ನೆಡೆಸಿದಾಗ ಡ್ರೈವರ್ ನಾವು ಬಾಂಬೆ ಇಂದ ಬರುತ್ತಿದ್ದೇವೆ ಎಂದು ಸತ್ಯ ಒಪ್ಪಿಕೊಂಡಿದ್ದಾನೆ. ಅವರನ್ನು ನಾನು ಕೆ.ಆರ್.ಪೇಟೆಗೆ ಕ್ವಾರೆಟೆನ್ ಮಾಡೋಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರೂ ಸೂಕ್ತ ದಾಖಲೆಗಳು ಇರಲಿಲ್ಲ ಅಂಬುಲೆನ್ಸ್ ಡ್ರೈವರ್ ಬಳಿ ಯಾವುದೇ ಧಾಖಲೆ ಇಲ್ಲದೆ ಬರುತ್ತಿರುವ ಕಾರಣ ತಾಲೋಕಿನ ಆಡಳಿತ ವ್ಯವಸ್ಥೆಗೆ ಭಂಗ ಬರುವ ಸಾಧ್ಯತೆ ಕಂಡುಬoದ ಹಿನ್ನಲೆ ಅನೆಗೂಳ ಚೆಕ್ ಪೋಸ್ಟ್ ಬಳಿಯೇ ಡ್ರೈವರ್ ಅನ್ನು ಪೊಲೀಸ್ ಅವರು ವಶಕ್ಕೆ ಪಡೆದು ವಿಚಾರಣೆ ನೆಡೆಸುತ್ತಿದ್ದಾರೆ

ಇದೆ ಸಂದರ್ಭದಲ್ಲಿ ಕಿಕ್ಕೇರಿ ಪೊಲೀಸ್ ಅಶೋಕ ಮಂಡ್ಯ ಡಿಆರ್ ಇರ್ಫಾನ್ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳಾದ ಪ್ರಶಾಂತ್, ತಿಪ್ಪೇಶ್, ನಟರಾಜ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನವೀನ್ ಗ್ರಾಮಸಹಾಯಕ ಪ್ರದೀಪ್ ಗೋಪಾಲ ಜಯರಾಮ್ ಸೇರಿದಂತೆ ಅನೇಕ ಅರೋಗ್ಯ ಇಲಾಖೆಯವರು ಉಪಸ್ಥಿತರಿದ್ದರು

error: