April 1, 2023

Bhavana Tv

Its Your Channel

ಕರೋನಾ ನಿಯಂತ್ರಣಕ್ಕೆ ಜಿಲ್ಲಾಢಳಿತದ ಬಳಿ ಹಣವಿದೆ ಗಾಳಿಸುದ್ದಿಗೆ ಕಿವಿಗೊಡಬೇಡಿ ; ಸಚೀವ ನಾರಾಯಣ ಗೌಡ

ಮಂಡ್ಯ: ಕೊರೋನಾ ನಿಯಂತ್ರಣ, ಆರೋಗ್ಯ ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಯಾವುದೇ ಹಣದ ಕೊರತೆಯಿಲ್ಲ. ತಾಲ್ಲೂಕು ಹಾಗೂ ಜಿಲ್ಲಾಡಳಿತದ ಬಳಿ ಸಾಕಷ್ಟು ಹಣವಿದೆ. ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಸಚಿವ ನಾರಾಯಣಗೌಡ ಭರವಸೆ ನೀಡಿದ್ದಾರೆ. ಕೊರೋನಾ ಮಹಾಮಾರಿಯಿಂದ ತೊಂದರೆ ಉಂಟಾಗುವುದು ಇನ್ನು ಮುಂದೆ ಸಾಮಾನ್ಯ ವಿಚಾರವಾಗಿದೆ. ಮಲೇರಿಯಾ, ಡೆಂಗ್ಯೂ ರೋಗಕ್ಕೆ ಚಿಕಿತ್ಸೆ, ಔಷಧಿ ಪಡೆಯುವಂತೆ ಇನ್ನು ಮುಂದೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಕೊರೋನಾ ವೈರಾಣು ಹರಡುವಿಕೆಯ ತಡೆಗೆ ಮುಂಜಾಗ್ರತೆಯೆ ಸದ್ಯದ ಮಟ್ಟಿಗೆ ಮದ್ದಾಗಿದೆ…ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಮುನ್ನಡೆಯುವುದೇ ಇಂದಿನ ಜೀವನ ಕ್ರಮದ ಅವಿಭಾಜ್ಯ ಅಂಗವಾಗಲಿದೆ ಎಂದು ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಮುಖಂಡರಾದ ಅಘಲಯ ಮಂಜುನಾಥ್, ಕೆ.ಎಸ್.ರಾಮೇಗೌಡ, ದಯಾನಂದ, ಕಿಕ್ಕೇರಿ ಕುಮಾರ್, ಕೆ.ವಿನೋದ್ ಕುಮಾರ್, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

About Post Author

error: