ಮಂಡ್ಯ: ಕೊರೋನಾ ಸಂಕಷ್ಠದ ಸಮಯದಲ್ಲಿ ಹಗಲಿರುಳೆನ್ನದೇ ದುಡಿಯುತ್ತಿರುವ ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂಧಿಗಳಿಗೆ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಪರ್ಸೊನಲ್ ಮ್ಯಾನೇಜರ್ ಎನ್-೯೫ ಮಾಸ್ಕುಗಳನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಿವಪ್ಪ ಅವರಿಗೆ ಹಸ್ತಾಂತರಿಸಿದರು.
ನAತರ ಮಾತನಾಡಿ ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ಮಟ್ಟಹಾಕುವ ನಿಟ್ಟಿನಲ್ಲಿ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತರು, ಪೋಲಿಸರು, ಅಗ್ನಿಶಾಮಕ ಸಿಬ್ಬಂಧಿಗಳು ಹಗಲಿರುಳೆನ್ನದೇ ತಮ್ಮ ಜೀವವನ್ನು ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಆದ್ದರಿಂದ ಸಂಕಷ್ಠವನ್ನು ಲೆಕ್ಕಿಸದೇ ದುಡಿಯುತ್ತಿರುವ ಕೊರೋನಾ ವಾರಿಯರ್ಸ್ ಆರೋಗ್ಯ ಸಂರಕ್ಷಣೆಗೆ ಅತ್ಯುತ್ತಮ ಗುಣಮಟ್ಟದ ಮಾಸ್ಕುಗಳನ್ನು ವಿತರಿಸಲಾಗುತ್ತಿದೆ ಎಂದು ಪದ್ಮನಾಭ ವಿವರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ