September 17, 2024

Bhavana Tv

Its Your Channel

ಹೊರರಾಜ್ಯದಿಂದ ಉತ್ತರಕನ್ನಡಕ್ಕೆ ಬರಲು ೬೭೦೭ ಅರ್ಜಿ ಸಲ್ಲಿಕೆ.

ಕಾರವಾರ: ಜಿಲ್ಲೆಗೆ ಹೊರರಾಜ್ಯದಿಂದ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲ್ಲೆ ಇದ್ದು ಈಗಾಗಲೇ ಹಲವರು ಸರ್ಕಾರಿ ಕ್ವಾರಂಟೈನನಲ್ಲಿ ಇದ್ದಾರೆ. ೬೭೦೭ ಮಂದಿ ಅರ್ಜಿಯನ್ನು ಸೇವಾಸಿಂಧುವಿನಲ್ಲಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ ಮಾಹಿತಿ ನೀಡಿದ್ದಾರೆ.
ಅರ್ಜಿ ಸಲ್ಲಿಸಿದ್ದವರ ಪೈಕಿ ೬೪೩೫ ಮಂದಿಗೆ ಜಿಲ್ಲೆಗೆ ಬರಲು ಅನುಮತಿ ನೀಡಲಾಗಿದೆ. ೪೦ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ೨೩೨ ಅರ್ಜಿಗಲೂ ಸೇವಾಸಿಂಧುವಿನಲ್ಲಿ ಬಾಕಿ ಇದೆ. ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಸ್ವಂತ ವಾಹನ ಅಥವಾ ಖಾಸಗಿ ವಾಹನದಲ್ಲಿ ಬರಲು ಇಚ್ಚಿಸಿದ್ದವರಿಗೆ ಅನುಮತಿ ನೀಡಿ ಅವಕಾಶ ನೀಡಲಾಗಿದೆ. ಹೀಗಾಗಿ ಹಲವರು ಈಗಾಗಲೇ ಜಿಲ್ಲೆಗೆ ಬಂದಿದ್ದಾರೆ. ಸರ್ಕಾರಿ ವಾಹನದ ಅವಕಾಶ ಕೇಳಿದವರು, ಈವರೆಗೆ ಜಿಲ್ಲೆಗೆ ಬರಲು ಸಾಧ್ಯವಾಗಿಲ್ಲ. ಸೊಂಕಿತ ನಾಲ್ಕು ರಾಜ್ಯ ಹೊರತುಪಡಿಸಿ ಉಳಿದವರಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಧ್ಯಮಗೊಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

error: