October 5, 2024

Bhavana Tv

Its Your Channel

ಜಿಲ್ಲೆಯಲ್ಲಿ ಬಿಡದೇ ಕಾಡುತ್ತಿರುವ ಕರೋನಾ ಇಂದು ಮತ್ತೆ ಒಂದು ಹೊಸ ಕೇಸ್ ಪತ್ತೆ.

ಕಾರವಾರ: ಜಿಲ್ಲೆಯ ಭಟ್ಕಳದಲ್ಲಿ ಈ ಹಿಂದೆ ಅಬ್ಬರಿಸುತ್ತಿದ್ದ ಕರೋನಾ ಉಳಿದ ತಾಲೂಕುಗಳಿಗೂ ವ್ಯಾಪಿಸುತ್ತಿದ್ದು ಮಂಗಳವಾರ ಕೋವಿಡ್- ೧೯ ಸೋಂಕು ದೃಢಪಟ್ಟಿದ್ದ ೧೬ ವರ್ಷದ ಯುವತಿಯ ತಂದೆಗೆ ಇಂದು ಕೊರೋನಾ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯ ಕರೋನಾ ಸೊಂಖಿತರ ಸಂಖ್ಯೆ ೫೭ಕ್ಕೆ ಏರಿದೆ.
ಮಧ್ಯಾಹ್ನದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನನಲ್ಲಿ ಇದು ದೃಡವಾಗಿದ್ದು ಮಹಾರಾಷ್ಟ್ರದಲ್ಲಿ ವಾಸ್ತವ್ಯ ಹೂಡಿದ್ದ ಶಿವಮೊಗ್ಗ ಸೊರಬ ಮೂಲದ ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳಿರುವ ಕುಟುಂಬ ಯಲ್ಲಾಪುರದ ಉಪಳೇಶ್ವರ ಸಂಬoಧಿಗಳ ಮನೆಗೆ ಹೋಗುವ ಉದ್ದೇಶದಿಂದ ಮೇ ೧೪ರಂದು ಬೆಳಿಗ್ಗೆ ೭ ಗಂಟೆಗೆ ಸೊಲ್ಲಾಪುರದಿಂದ ಹೊರಟು, ಕಿರವತ್ತಿ ಚೆಕ ಪೋಸ್ಟ್ ಗೆ ಸಂಜೆ ೪ ಗಂಟೆಗೆ ತಲುಪಿದ್ದರು ಎನ್ನಲಾಗುತ್ತಿದ್ದ, ಸ್ಥಳಿಯ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗಾಗಿ ಆಗಮಿಸಿದ್ದರು.
ನಂತರ ಇವರನ್ನು ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ ಒಂದು ದಿನ ತಾಲೂಕು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿ, ಮೇ ೧೫ರಂದು ಯಲ್ಲಾಪುರ ಪಟ್ಟಣದ ಸಾಂಸ್ಥಿಕ ಕ್ವಾರಂಟೈನಗೆ ಕಳುಹಿಸಲಾಗಿತ್ತು. ಈ ಪೈಕಿ ೧೬ ವರ್ಷದ ಯುವತಿಗೆ ನಿನ್ನೆ ಸೋಂಕು ದೃಢಪಟ್ಟಿದ್ದರೆ, ಇಂದು ಆಕೆಯ ತಂದೆಗೆ ಸೋಂಕು ದೃಢಪಟ್ಟಿದೆ.

ಇದರಿಂದ ಜಿಲ್ಲೆಯಲ್ಲಿ ಒಟ್ಟು ಕರೋನಾ ಸೋಂಕಿತರ ಸಂಖ್ಯೆ ೫೭ಕ್ಕೆ ಏರಿಕೆ ಏರಿದ್ದು, ೪೬ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

error: