December 19, 2024

Bhavana Tv

Its Your Channel

ಹೊನ್ನಾವರದಲ್ಲಿ ಮತ್ತೊಂದು ಕರೋನಾ ಪಾಸಟಿವ್

ಹೊನ್ನಾವರ: ಮುಂಬೈನಿoದ ಜಿಲ್ಲೆಗೆ ಬಂದವರಲ್ಲಿ ಕರೋನಾ ಸೊಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೆ ಇದ್ದು ಶುಕ್ರವಾರವು ಕೂಡಾ ಹೊನ್ನಾವರದಲ್ಲಿ ಮತ್ತೊಂದು ಹೊಸ ಪ್ರಕರಣ ಪತ್ತೆಯಾಗಿದೆ. ಈಗಾಗಲೇ ಕ್ವಾರಂಟೈನಲ್ಲಿ ಇರುವ ಐದು ಮಂದಿಗೆ ಪಾಸಿಟಿವ್ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮತ್ತೊರ್ವರಿಗೆ ಕರೋನಾ ಸೊಂಕು ದೃಡವಾಗಿದ್ದು ೪೪ವರ್ಷದ ಪುರುಷನಿಗೆ ಸೊಂಕು ತಗುಲಿದೆ. ಮುಂಬೈನಲ್ಲಿ ಉದ್ಯಮಿಯಾಗಿರುವ ತಾಲೂಕಿನ ಮಂಕಿ ಮೂಲದ ಇವರು ಮೇ ೧೫ರಂದು ಹೊನ್ನಾವರಕ್ಕೆ ಪತ್ನಿ ಹಾಗೂ ಮಗನೊಂದಿಗೆ ಆಗಮಿಸಿದ್ದು ಇವರನ್ನು ಹೊಟೇಲ್ ಕ್ವಾರಂಟೈನಲ್ಲಿ ಇಡಲಾಗಿತ್ತು. ಮಧ್ಯಾಹ್ನದ ಹೆಲ್ತ ಬುಲೆಟಿನ್ ನಲ್ಲಿ ಇವರ ಸೊಂಕು ದೃಡವಾಗಿದ್ದು ಹೆಂಡತಿ ಮತ್ತು ಮಗನ ರಿಪೋರ್ಟ ಬರಬೇಕಿದೆ. ಅಲ್ಲದೇ ೧೦೦ಕ್ಕೂ ಅಧಿಕ ಮಂದಿಯ ವರದಿ ಬರಬೇಕಿದ್ದು ತಾಲೂಕಿನಲ್ಲಿ ಇನ್ನು ಹೊಸಸ ಪ್ರಕರಣ ಹೆಚ್ಚಾಗಲಿದೆಯಾ ಎನ್ನುವ ಆತಂಕ ಮನೆ ಮಾಡಿದೆ.
ಜಿಲ್ಲೆಯಲ್ಲಿ ಒಟ್ಟು ೬೪ ಸೊಂಕಿತರಿದ್ದ ಅದರಲ್ಲಿ ೫೨ ಮಂದಿ ಸಕ್ರಿಯರಿದ್ದಾರೆ.

error: