December 19, 2024

Bhavana Tv

Its Your Channel

ಕರ್ನಾಟಕ ಕರೋನಾ ಬಿಗ್ ಶಾಕ್ ; ಮಧ್ಯಾಹ್ನದ ಬುಲೆಟಿನನಲ್ಲಿ ೧೦೫ ಜನರಿಗೆ ಕೊರೋನಾ ಪಾಸಿಟಿವ್,

ಬೆಂಗಳೂರು : ರಾಜ್ಯದಲ್ಲಿ ಕರೋನಾ ಆರ್ಭಟ ಮುಂದುವರೆದಿದ್ದು ಇಂದು ಮಧ್ಯಾಹ್ನವೇ ೧೦೭ ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಆತಂಕ ಹೆಚ್ಚಿಸಿದೆ. ನಿನ್ನೆ ದಾಖಲೆಯ ೧೪೩ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಇಂದು ಮತ್ತೆ ಕೊರೊನಾ ಸೋಂಕಿನ ಸರಣಿ ಮುಂದುವರೆದಿದ್ದು, ರಾಜ್ಯದಲ್ಲಿ ಇಂದು ದಾಖಲೆಯ ೧೦೫ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ೧೭೧೦ಕ್ಕೆ ಏರಿಕೆಯಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಿಂದಾಗಿ ತಿಳಿದು ಬಂದಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ ವಿವಿಧ ಜಿಲ್ಲೆಗಳಲ್ಲಿ ದಾಖಲೆಯ ೧೦೫ ಜನರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಹೀಗಾಗಿ ಸೋಂಕಿತರ ಸಂಖ್ಯೆ ೧೭೦೧೦ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.

ಇಂದು ಜಿಲ್ಲಾವಾರು ಕೊರೊನಾ ವೈರಸ್ ಸೋಂಕು ಪತ್ತೆಯಾದವರ ಯಾದಿ

ಬೆಂಗಳೂರು ಗ್ರಾಮಾಂತರ – ೦೪
ಚಿಕ್ಕಬಳ್ಳಾಪುರ -೪೫
ಧಾರವಾಡ – ೦೨
ಹಾಸನ-೧೪
ತುಮಕೂರು -೦೮
ಬೆಂಗಳೂರು ನಗರ -೦೫
ಮಂಡ್ಯ – ೦೩
ದಕ್ಷಿಣ ಕನ್ನಡ -೦೧
ಬಾಗಲಕೋಟೆ -೦೧
ಉತ್ತರ ಕನ್ನಡ – ೦೧
ಚಿತ್ರದುರ್ಗ – ೦೧
ಚಿಕ್ಕಮಗಳೂರು – ೦೫
ಹಾವೇರಿ – ೦೩
ದಾವಣಗೆರೆ – ೦೩
ಬೆಳಗಾವಿ -೦೧
ಬೀದರ್ -೦೬
ವಿಜಯಪುರ – ೦೨
ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೧೭೧೦ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಕೊರೋನಾಗೆ ಇದುವರೆಗೆ ೪೧ ಜನರು ಬಲಿಯಾಗಿದ್ದಾರೆ. ಇದುವರೆಗೆ ೫೮೮ ಕೊರೊನಾ ವೈರಸ್ ಸೋಂಕು ಪೀಡಿತರು ಗುಣಮುಖರಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಧ್ಯಾಹ್ನದ ಹೆಲ್ತ್ ಬುಲೆಟಿನ್‌ನಿಂದ ಲಭ್ಯವಾಗಿದೆ.

error: