March 29, 2024

Bhavana Tv

Its Your Channel

ಕಾರ್ಮಿಕ ಇಲಾಖೆಯಿಂದ ಮಂಜೂರಾದ ಕಿಟ್ ವಿತರಿಸಿದ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ


ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ತಾಲೂಕಿನ ಸವಿತಾ ಸಮಾಜ, ಲಾಂಡ್ರಿ ವೃತ್ತಿ ನಿರ್ವಹಿಸುವವರು, ಹೂ ವ್ಯಾಪರಿಗಳು, ಪೆಂಟರ್ ವೃತ್ತಿ ನಿರ್ವಹಿಸುವ ೨೧೦ಕ್ಕು ಅಧಿಕ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಮಂಜೂರಾದ ಕಿಟ್ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ವಿತರಿಸಿ ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ಕರೋನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಅಲ್ಲದೇ ಗೊಕರ್ಣದಲ್ಲಿ ಬೆಳೆದ ತರಕಾರಿಯನ್ನು ೨೦ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ವಿತರಣೆಯನ್ನು ಕಾರ್ಯಕರ್ತರ ಮೂಲಕ ಮನೆಬಾಗಿಲಿಗೆ ತಲುಪಿಸುವ ಕಾರ್ಯ ನಡೆದಿದೆ. ಇದರಿಂದ ಬೆಳೆಗಾರರ ಜೊತೆ ಸಾರ್ವಜನಿಕರಿಗೂ ಅನೂಕೂಲವಾಗಿದೆ. ರಾಜ್ಯದಲ್ಲಿ ಪ್ರಥಮ ಎನ್ನುವಂತೆ ೧೭೦೦ಕ್ಕೂ ಅಧಿಕ ರಿಕ್ಷಾ ಚಾಲಕರಿಗೆ ತಲಾ ೧ಸಾವಿರ ನೀಡುವ ಮೂಲಕ ನೇರವಾಗಿರುದಕ್ಕೆ ಸರ್ಕಾರ ಕೂಡಾ ಸ್ಪಂದಿಸಿ ಧನಸಹಾಯ ನೀಡುತ್ತಿದೆ. ಅಲ್ಲದೇ ಗ್ರಾಮದ ಬಡ ಕುಟುಂಬಗಳಿಗೆ ದಿನಸಿ ಕಿಟ್ ನೀಡಲಾಗಿದೆ. ಕ್ಷೇತ್ರಕ್ಕೆ ಕಾರ್ಮಿಕ ಸಚೀವರಾದ ಶಿವರಾಮ ಹೆಬ್ಬಾರ ೪ಸಾವಿರ ಕಿಟ್ ನೀಡಿದ್ದಾರೆ. ಅದನ್ನು ಕಾರ್ಯಕರ್ತರ ಮೂಲಕ ವಿವಿಧ ವೃತ್ತಿಯಲ್ಲಿದ್ದು ಸಂಕಷ್ಟದಲ್ಲಿದ್ದವರಿಗೆ ಹಾಗೂ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಕಷ್ಟಕ್ಕೆ ಸದಾ ಕಾಲ ಸ್ಪಂದಿಸಲಿದ್ದು ಇನ್ನು ಬೇಡಿಕೆ ಬಂದಿರುದರಿ0ದ ೫೦೦ಕ್ಕೂ ಅಧಿಕ ಕಿಟ್ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಕರೋನಾ ಸಂಕಷ್ಟದಲ್ಲಿ ನೆರವಾದರೂ ವಿರೋಧಿ ಹೇಳಿಕೆ ನೀಡುವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದ ಕಾರ್ಯಕರ್ತರ ಮೂಲಕ ಸಂಕಷ್ಟದಲ್ಲಿರುವವರ ನೆರವಿಗೆ ಸದಾ ಕಾಲ ನಿಲ್ಲಲಿದ್ದೇನೆ ವಿರೋಧಿಗಳಿಗೆ ತಿರುಗೇಟು ನೀಡಿದರು.
ಫಲಾನುಭವಿಗಳಾದ ವಿವಿಧ ಸಮುದಾಯದ ಅಧ್ಯಕ್ಷರು ಮಾತನಾಡಿ ಸಂಕಷ್ಟದ ಸಮಯದಲ್ಲಿ ನೆರವಾದ ಶಾಸಕರಿಗೆ ಅಭಿನಂದಿಸಿದರು.
ವೇದಿಕೆಯಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಗ್ರಾಮ ಪಂಚಾಯತ ಅಧ್ಯಕ್ಷ ಟಿ.ಎಸ್.ಹೆಗಡೆ, ಪಟ್ಟಣ ಪಂಚಾಯತ ಸದಸ್ಯರಾದ ನಾಗರಾಜ ಭಟ್, ಮಹೇಶಮೇಸ್ತ, ಸುರೇಶ ವಿಜುಕಾಮತ್, ಮುಖಂಡರಾದ ಎಂ.ಜಿ.ಭಟ್, ದತ್ತಾತ್ರೇಯ ಮೇಸ್ತ ಗಣಪತಿ ನಾಯ್ಕ ಬಿಟಿ, ಎಂಎಸ್.ಹೆಗಡೆ, ಮಂಜುನಾಥ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: